Tri-Nation Series: ಭಾರತ ಮಹಿಳಾ ತಂಡಕ್ಕೆ ಮತ್ತೊಂದು ಗೆಲುವು, South Africa ವಿರುದ್ಧ 15 ರನ್ ವಿರೋಚಿತ ಜಯ

ಸವಾಲಿನ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಭರ್ಜರಿ ಆರಂಭ ಪಡೆಯಿತಾದರೂ ಮಧ್ಯಮ ಮತ್ತು ಕೆಳ ಕ್ರಮಾಂಕದ ಆಟಗಾರ್ತಿಯರು ಪೆವಿಲಿಯನ್ ಪರೇಡ್ ನಡೆಸಿದ್ದರಿಂದ ಸೋಲು ಎದುರಾಯಿತು.
India Women won by 15 runs Against
ಭಾರತಕ್ಕೆ ಜಯ
Updated on

ಕೊಲಂಬೋ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳೆಯರ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ತಂಡ ಮತ್ತೊಂದು ಗೆಲುವು ಸಾಧಿಸಿದ್ದು, ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.

ಶ್ರೀಲಂಕಾ ರಾಜಧಾನಿ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ವನಿತೆಯರ ತಂಡ ನಿಗಧಿತ 50 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 276 ರನ್ ಪೇರಿಸಿತು. ಭಾರತದ ಪರ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ 78 ರನ್ ಕಲೆಹಾಕಿದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಜೆಮಿಮಾ ರೋಡ್ರಿಗಸ್ ತಲಾ 41 ರನ್ ಕೊಡುಗೆ ನೀಡಿದರು.

ಸ್ಮೃತಿ ಮಂದನ 36 ರನ್ ಗಳಿಸಿದರೆ, ರಿಚಾ ಘೋಷ್ 24 ರನ್ ಗಳಿಸಿ ತಂಡದ ಮೊತ್ತ 250ರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಭಾರತ ತಂಡ ನಿಗಧಿತ 50 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 276 ರನ್ ಕಲೆ ಹಾಕಿ, ದಕ್ಷಿಣ ಆಫ್ರಿಕಾಗೆ ಗೆಲ್ಲಲು 277ರನ್ ಗುರಿ ನೀಡಿದೆ.

ದಕ್ಷಿಣ ಆಫ್ರಿಕಾ ಪರ ನೊಕುಲುಲೆಕೊ ಮ್ಲಾಬಾ 2 ವಿಕೆಟ್ ಪಡೆದರೆ, ಅಯಾಬೊಂಗಾ ಖಾಕಾ, ಮಸಾಬಟಾ ಕ್ಲಾಸ್, ನಾಡಿನ್ ಡಿ ಕ್ಲರ್ಕ್ ಮತ್ತು ಅನ್ನೇರಿ ಡೆರ್ಕ್ಸೆನ್ ತಲಾ ಒಂದು ವಿಕೆಟ್ ಪಡೆದರು.

India Women won by 15 runs Against
Tri-Nation Series: ಶ್ರೀಲಂಕಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ, ಸರಣಿ ಶುಭಾರಂಭ

ಟಜ್ಮಿನ್ ಬ್ರಿಟ್ಸ್ ಏಕಾಂಗಿ ಹೋರಾಟ ವ್ಯರ್ಥ, ಭಾರತಕ್ಕೆ ಭರ್ಜರಿ ಜಯ

ಇನ್ನು 277 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 49.2 ಓವರ್ ನಲ್ಲಿ 261 ರನ್ ಗಳಿಗೆ ಆಲೌಟ್ ಆಗುವ ಮೂಲಕ 15 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಸವಾಲಿನ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಭರ್ಜರಿ ಆರಂಭ ಪಡೆಯಿತಾದರೂ ಮಧ್ಯಮ ಮತ್ತು ಕೆಳ ಕ್ರಮಾಂಕದ ಆಟಗಾರ್ತಿಯರು ಪೆವಿಲಿಯನ್ ಪರೇಡ್ ನಡೆಸಿದ್ದರಿಂದ ಸೋಲು ಎದುರಾಯಿತು.

ಮೊದಲ ವಿಕೆಟ್ ಗೆ ದಕ್ಷಿಣ ಆಫ್ರಿಕಾ 83 ರನ್ ಕಲೆ ಹಾಕಿ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿತ್ತು. ಆರಂಭಿಕರಾದ ನಾಯಕಿ ಲಾರಾ ವೋಲ್ವಾರ್ಡ್ 43 ಗಳಿಸಿ ದೀಪ್ತಿ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ಲಾರಾ ಗುಡಾಲ್ ಕೂಡ 9 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಈ ಹಂತದಲ್ಲಿ ಮತ್ತೊಂದು ಬದಿಯಲ್ಲಿದ್ದ ಟಜ್ಮಿನ್ ಬ್ರಿಟ್ಸ್ ಏಕಾಂಗಿ ಹೋರಾಟ ನಡೆಸಿದರು. ಒಂದೆಡೆ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೆ, ಬ್ರಿಟ್ಸ್ ಮಾತ್ರ ಬೇರೆಲ್ಲೂ ಗಮನಹರಿಸದೇ ಬ್ಯಾಟಿಂಗ್ ಮುಂದುವರೆಸಿದರು. ನೋಡ ನೋಡುತ್ತಲೇ ಶತಕ ಸಿಡಿಸಿದ ಬ್ರಿಟ್ಸ್ ಅಂತಿಮ ಹಂತದಲ್ಲಿ 109ರನ್ ಗಳಿಸಿ ಸ್ನೇಹ್ ರಾಣಾಗೆ ವಿಕೆಟ್ ಒಪ್ಪಿಸಿದರು. ಈ ಹೊತ್ತಿಗಾಗಲೇ ದಕ್ಷಿಣ ಆಫ್ರಿಕಾ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ತೀವ್ರ ಸಿಲುಕಿತ್ತು. ಅಂತಿಮವಾಗಿ 49.2 ಓವರ್ ನಲ್ಲಿ 261 ರನ್ ಗಳಿಸಿದ್ದಾಗ ಆಲೌಟ್ ಆಯಿತು.

ಭಾರತದ ಪರ ಸ್ನೇಹ್ ರಾಣಾ 5 ವಿಕೆಟ್ ಪಡೆದರೆ, ಅರುಂಧತಿ ರೆಡ್ಡಿ, ನಲ್ಲಪುರರೆಡ್ಡಿ ಚರಣಿ ಮತ್ತು ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದರು.

ಟೂರ್ನಿಯಲ್ಲಿ ಭಾರತಕ್ಕೆ 2ನೇ ಜಯ

ಇನ್ನು ಈ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತಕ್ಕೆ ಇದು 2ನೇ ಗೆಲುವಾಗಿದ್ದು, ಈ ಹಿಂದೆ ನಡೆದ ಮೊದಲ ಪಂದ್ಯದಲ್ಲಿ ಭಾರತ ಶ್ರೀಲಂಕಾ ವನಿತೆಯರ ತಂಡವನ್ನು 9 ವಿಕೆಟ್ ಗಳ ಜಯ ಸಾಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com