

ಕರಾಚಿ: ಪಾಕಿಸ್ತಾನಿಗಳು ಸೇಡಿಗಾಗಿ ಎತ್ತಿದ ಕೈ. ಪ್ರತೀಕಾರ ತೀರಿಸಿಕೊಳ್ಳಲು ಕತ್ತಿ ಮಸಿಯುತ್ತಲೇ ಇರುತ್ತಾರೆ. ಅಂತಹುದೇ ಘಟನೆ ಈಗ ಪಾಕಿಸ್ತಾನ ಸೂಪರ್ ಲೀಗ್ (PSL) 2026 ಟೂರ್ನಿಯಲ್ಲಿಯೂ ನಡೆದಿದೆ. ಆಸ್ಚ್ರೇಲಿಯಾದ ಲೆಜೆಂಡ್ ಸ್ಟೀವ್ ಸ್ಮಿತ್ ವಿರುದ್ಧ ಸಾಹಿಬ್ಜಾದಾ ಫರ್ಹಾನ್ ಕಡೆಗೂ ತೀರಿಸಿಕೊಂಡಿದ್ದಾರೆ.
ಕ್ವೆಟ್ಟಾ ಗ್ಲಾಡಿಯೇಟರ್ಸ್ v/s ಮುಲ್ತಾನ್ ಸುಲ್ತಾನ್ ನಡುವಿನ ಪಂದ್ಯದ ವೇಳೆ ಇದು ನಡೆದಿದೆ. ಓವರ್ ನ ಅಂತಿಮ ಎಸೆತದಲ್ಲಿ ತನ್ನ ಪಾರ್ಟನರ್ ಆಗಿದ್ದ ಸಾಹಿಬ್ಜಾದಾ ಫರ್ಹಾನ್ ಓಡಲು ನಿರಾಕರಿಸಿದ್ದಾರೆ. ಇದರಿಂದ ಸ್ಟೀವ್ ಸ್ಮಿತ್ ತೀವ್ರ ಹತಾಶರಾಗಿದ್ದು, ಫರ್ಹಾನ್ ಮೇಲೆ ಸಿಟ್ಟಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಯೂ ನಡೆಯುತ್ತಿದೆ.
ಏಕೆಂದರೆ, ಈ ವರ್ಷದ ಆರಂಭದಲ್ಲಿ ಸ್ಮಿತ್ ಮತ್ತು ಬಾಬರ್ ಅಜಂ ಆಡುವಾಗ ಇದೇ ರೀತಿ ನಡೆದಿತ್ತು. ಹೀಗಾಗಿ ಅನೇಕರು ಇದನ್ನು ಸೇಡಿನ ಪ್ರಕರಣ ಎಂದು ಕರೆದಿದ್ದಾರೆ.
ಮುಲ್ತಾನ್ ಸುಲ್ತಾನ್ ಪರ ಬ್ಯಾಟಿಂಗ್ ಮಾಡುತ್ತಿದ್ದ ಸ್ಮಿತ್ ಮೂರನೇ ಓವರ್ ನ ಅಂತಿಮ ಎಸೆತವನ್ನು ಹೊಡೆದು ಸ್ಟ್ರೈಕ್ ಉಳಿದುಕೊಳ್ಳಲು ಸಿಂಗಲ್ ರನ್ ಪಡೆಯಲು ಯತ್ನಿಸಿದರು. ಆದರೆ ಫರ್ಹಾನ್ ಓಡಲೇ ಇಲ್ಲ. ಬದಲಿಗೆ ಸ್ಮಿತ್ ಅವರನ್ನು ಹಿಂದಕ್ಕೆ ಕಳುಹಿಸಿದರು. ಸ್ಮಿತ್ ನಾನ್-ಸ್ಟ್ರೈಕರ್‌ನ ತುದಿಯಲ್ಲಿ ಹತಾಶೆಯಿಂದ ತನ್ನ ತೋಳುಗಳನ್ನು ಮೇಲಕ್ಕೆ ಎಸೆಯುವುದು ಕಂಡುಬಂದಿತು.
ಸಂಭಾವ್ಯ ರನ್-ಔಟ್ ಅಪಾಯದಿಂದ ತಪ್ಪಿಸಿಕೊಳ್ಳಲು ಫರ್ಹಾನ್ ಈ ರೀತಿ ಮಾಡಿದ್ದರೂ, ಇದು ಜನವರಿ 2026 ರ ಬಿಗ್ ಬ್ಯಾಷ್ ಲೀಗ್ (BBL) ನ ಪ್ರತೀಕಾರ ಎಂದು ಪಾಕ್ ಅಭಿಮಾನಿಗಳು ಹೇಳುತ್ತಿದ್ದಾರೆ.
ಬಿಬಿಎಲ್ ನಲ್ಲಿ ಸಿಡ್ನಿ ಸಿಕ್ಸರ್ ಪರ ಆಡುತ್ತಿದ್ದ ಸ್ಮಿತ್, ನಿರ್ಣಾಯಕ ಹಂತದಲ್ಲಿ ಓಡದೇ ಬಾಬರ್ ಅಜಂ ಸಿಂಗಲ್ ರನ್ ಪಡೆಯಲು ನಿರಾಕರಿಸಿದ್ದರು. ಈ ಘಟನೆಗೆ ಈಗ ಫರ್ಹಾನ್ ಸೇಡು ತೀರಿಸಿಕೊಂಡಿದ್ದಾರೆ ಎಂದು ಪಾಕ್ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.
Advertisement