IPL 2026: LSG vs KKR ಸ್ಫೋಟಕ ಆಟ.. ಇತಿಹಾಸ ಬರೆದ Rinku Singh, 15 ವರ್ಷಗಳ ಹಳೆಯ MS Dhoni ದಾಖಲೆ ಧೂಳಿಪಟ

ಭಾನುವಾರ ಎಲ್‌ಎಸ್‌ಜಿ ವಿರುದ್ಧ ರಿಂಕು ಗಳಿಸಿದ 83 ರನ್‌ಗಳು ಐಪಿಎಲ್ ಇತಿಹಾಸದಲ್ಲಿ ಅವರ ಅತ್ಯಧಿಕ ಮೊತ್ತವಾಗಿದೆ.
Rinku Singh creates history
ರಿಂಕು ಸಿಂಗ್
Updated on

ಲಖನೌ: ಐಪಿಎಲ್ ಟೂರ್ನಿಯಲ್ಲಿ ನಿನ್ನೆ ನಡೆದ ರಣ ರೋಚಕ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ರಿಂಕು ಸಿಂಗ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಇತಿಹಾಸ ನಿರ್ಮಿಸಿದ್ದು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ 15 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ.

ಹೌದು.. ನಿನ್ನೆ ಲಖನೌನ ಏಕಾನ ಕ್ರೀಡಾಂಗಣದಲ್ಲಿ ನಡೆದ ಕೆಕೆಆರ್ ಮತ್ತು ಎಲ್ ಎಸ್ ಜಿ ತಂಡಗಳ ನಡುವಿನ ಪಂದ್ಯದಲ್ಲಿ ಕೋಲ್ಕತಾ ತಂಡ ಸೂಪರ್ ಓವರ್ ನಲ್ಲಿ ಅಮೋಘ ಗೆಲುವು ದಾಖಲಿಸಿತು. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಕೋಲ್ಕತಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ರಿಂಕು ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು ಕೇವಲ 51 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಿತ 83 ರನ್ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಸುನಿಲ್ ನರೈನ್ (6 ಎಸೆತಗಳಲ್ಲಿ 4 ರನ್) ಅವರೊಂದಿಗೆ, ಅವರು ಎಂಟನೇ ವಿಕೆಟ್‌ಗೆ ಕೇವಲ 30 ಎಸೆತಗಳಲ್ಲಿ 62 ರನ್ ಗಳ ಜೊತೆಯಾಟವಾಡಿದರು. ಇದು ಕೆಕೆಆರ್‌ನ ಒಟ್ಟು ಮೊತ್ತವನ್ನು 20 ಓವರ್‌ಗಳಲ್ಲಿ 155/7 ಕ್ಕೆ ತಲುಪಿಸಿತು.

Rinku Singh creates history
IPL 2026: LSG ವಿರುದ್ಧ ಸೂಪರ್​ ಓವರ್​ನಲ್ಲಿ ಗೆದ್ದು ಬೀಗಿದ KKR

ಧೋನಿ ದಾಖಲೆ ಪತನ

ರಿಂಕು ಸಿಂಗ್ ಈ ಅದ್ಭುತ ಇನ್ನಿಂಗ್ಸ್ ಮೂಲಕ 15 ವರ್ಷಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ಸಾಧಿಸಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಮೊದಲ ಇನ್ನಿಂಗ್ಸ್ ವೇಳೆ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಕೀರ್ತಿಗೆ ರಿಂಕುಸಿಂಗ್ ಭಾಜನರಾಗಿದ್ದಾರೆ.

ಈ ಹಿಂದೆ ಮೇ 22 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್‌ನ ಐಪಿಎಲ್ 2011 ರ ಪಂದ್ಯದಲ್ಲಿ, ಧೋನಿ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ 40 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿದ್ದರು. ಇದು ಈ ವರೆಗೂ ಅಗ್ರಸ್ಥಾನದಲ್ಲಿತ್ತು.

Highest Score By An Indian Batter At No. 6 or Lower In 1st Innings of IPL Match

  • Rinku Singh: 83* vs LSG (2026)

  • MS Dhoni: 70* vs RCB (2011)

  • Dinesh Karthik: 69 vs RR (2010)

  • Shardul Thakur: 68 vs RCB (2023)

ಅಂತೆಯೇ ಐಪಿಎಲ್ ನಲ್ಲಿ, ಮೊದಲ ಇನ್ನಿಂಗ್ಸ್ ವೇಳೆ 6ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂದರೆ ಅದು ಆಂಡ್ರೆ ರಸೆಲ್.

ಏಪ್ರಿಲ್ 10, 2018 ರಂದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2018 ರ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸುವಾಗ ರಸೆಲ್ 36 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದ್ದರು. ಇದೀಗ ನಂತರದ ಸ್ಥಾನದಲ್ಲಿ ರಿಂಕು ಸಿಂಗ್ ಇದ್ದಾರೆ.

Highest Score In 1st Innings of IPL Match By No. 6 or Lower Batter

  • Andre Russell: 88* vs CSK (2018)

  • Rinku Singh: 83* vs LSG (2026)

  • MS Dhoni: 70* vs RCB (2011)

  • Ryan ten Doeschate: 70* vs MI (2011)

  • Kieron Pollard: 70 vs RR (2015)

ಉಳಿದಂತೆ ಹಾರ್ದಿಕ್ ಪಾಂಡ್ಯ ಐಪಿಎಲ್ ಪಂದ್ಯದಲ್ಲಿ 6ನೇ ಕ್ರಮಾಂಕ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಏಪ್ರಿಲ್ 28 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ 2019 ರ ಐಪಿಎಲ್ ಪಂದ್ಯದಲ್ಲಿ ಚೇಸಿಂಗ್ ವೇಳೆ, ಪಾಂಡ್ಯ ಕೇವಲ 34 ಎಸೆತಗಳಲ್ಲಿ 91 ರನ್ ಗಳಿಸಿದ್ದರು.

ಭಾನುವಾರ ಎಲ್‌ಎಸ್‌ಜಿ ವಿರುದ್ಧ ರಿಂಕು ಗಳಿಸಿದ 83 ರನ್‌ಗಳು ಐಪಿಎಲ್ ಇತಿಹಾಸದಲ್ಲಿ ಅವರ ಅತ್ಯಧಿಕ ಮೊತ್ತವಾಗಿದೆ. ಮೇ 20, 2023 ರಂದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅವರು ತಮ್ಮ ಹಿಂದಿನ ಅತ್ಯುತ್ತಮ ಐಪಿಎಲ್ ಸ್ಕೋರ್ 67 (ಅಜೇಯ) ಗಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com