ದಕ್ಷಿಣ ಆಫ್ರಿಕಾದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗನನ್ನು ಪುರುಷರ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದ ಪಾಕಿಸ್ತಾನ!

ಎರಡು ವರ್ಷಗಳ ಅವಧಿಗೆ ನೇಮಕಗೊಂಡಿರುವ ಸ್ಮಿತ್, ಆಗಸ್ಟ್ 19 ರಂದು ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಪಾಕಿಸ್ತಾನದ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
Michael Smith
ಮೈಕೆಲ್ ಸ್ಮಿತ್
Updated on

ದಕ್ಷಿಣ ಆಫ್ರಿಕಾದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಮತ್ತು ತರಬೇತುದಾರ ಮೈಕೆಲ್ ಸ್ಮಿತ್ ಅವರನ್ನು ಪಾಕಿಸ್ತಾನ ಪುರುಷರ ತಂಡದ ಬ್ಯಾಟಿಂಗ್ ತರಬೇತುದಾರರನ್ನಾಗಿ ನೇಮಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಕಟಣೆಯಲ್ಲಿ ತಿಳಿಸಿದೆ. ಸ್ಮಿತ್ ಅವರು ತಂಡದೊಂದಿಗೆ ರೆಡ್-ಬಾಲ್ (ಟೆಸ್ಟ್) ಮತ್ತು ವೈಟ್-ಬಾಲ್ (ಏಕದಿನ ಹಾಗೂ ಟಿ20) ಎರಡೂ ಮಾದರಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಐಸಿಸಿ (ICC) ಮಾಹಿತಿ ಪ್ರಕಾರ, 46 ವರ್ಷದ ಸ್ಮಿತ್ ಅವರು 2003 ರಿಂದ 2013ರ ಅವಧಿಯಲ್ಲಿ 89 ಪ್ರಥಮ ದರ್ಜೆ ಪಂದ್ಯಗಳು, 72 ಲಿಸ್ಟ್-ಎ ಪಂದ್ಯಗಳು ಮತ್ತು 16 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಕರಾಚಿ ಕಿಂಗ್ಸ್ ತಂಡಗಳ ತರಬೇತಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಈ ಆವೃತ್ತಿಯ ಆರಂಭದಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡದ ಸಹಾಯಕ ತರಬೇತುದಾರರಾಗಿದ್ದರು. ಅಲ್ಲದೆ, ಅವರು ಆಸ್ಟ್ರೇಲಿಯಾದ ಹೋಬಾರ್ಟ್ ಹರಿಕೇನ್ಸ್ ಮತ್ತು ಕ್ರಿಕೆಟ್ ಟ್ಯಾಸ್ಮೇನಿಯಾ ತಂಡಗಳ ಬ್ಯಾಟಿಂಗ್ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ ಮತ್ತು ದಕ್ಷಿಣ ಆಫ್ರಿಕಾದ ಕೆಝಡ್‌ಎನ್ (KZN) ಇನ್‌ಲ್ಯಾಂಡ್ ಹಾಗೂ ಈಸ್ಟರ್ನ್ ಪ್ರಾವಿನ್ಸ್ ತಂಡಗಳಿಗೆ ತರಬೇತಿ ಕನ್ಸಲ್ಟೆಂಟ್ ಆಗಿದ್ದರು.

ಎರಡು ವರ್ಷಗಳ ಅವಧಿಗೆ ನೇಮಕಗೊಂಡಿರುವ ಸ್ಮಿತ್, ಆಗಸ್ಟ್ 19 ರಂದು ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಪಾಕಿಸ್ತಾನದ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ಪಾಕಿಸ್ತಾನವು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

Michael Smith
5 ವಿಕೆಟ್‌, 0 ರನ್‌: ಜಸ್ಟಿನ್ ಗ್ರೀವ್ಸ್ ಮಾರಕ ದಾಳಿಗೆ ಪಾಕಿಸ್ತಾನ ತತ್ತರ; ಹೊಸ ವಿಶ್ವದಾಖಲೆ ಬರೆದ ವಿಂಡೀಸ್ ವೇಗಿ! Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com