U19 World Cup 2026 Final: 80 ಎಸೆತಗಳಲ್ಲಿ 175 ರನ್; ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಇಂಗ್ಲೆಂಡ್ ತತ್ತರ, ದಾಖಲೆಗಳ ಸುರಿಮಳೆ!

ಒಟ್ಟಾರೆ ಟೂರ್ನಮೆಂಟ್ ದಾಖಲೆಗಳಲ್ಲಿ, U19 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ವೈಭವ್ ಸೂರ್ಯವಂಶಿ ಪಾತ್ರರಾದರು.
Vaibhav Suryavanshi
ವೈಭವ್ ಸೂರ್ಯವಂಶಿ
Updated on

ಹರಾರೆಯಲ್ಲಿ ಶುಕ್ರವಾರ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ U19 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮತ್ತೊಂದು ಸ್ಫೋಟಕ ಇನಿಂಗ್ಸ್ ಮೂಲಕ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದರು. ಈ ಯುವ ಪ್ರತಿಭೆ ಕೇವಲ 55 ಎಸೆತಗಳಲ್ಲಿ ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. ಅವರ ಇನಿಂಗ್ಸ್ ಆರು ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಇದು U19 ವಿಶ್ವಕಪ್ ಇತಿಹಾಸದಲ್ಲಿಯೇ ಭಾರತೀಯ ಆಟಗಾರನೊಬ್ಬ ಗಳಿಸಿದ ವೇಗದ ಶತಕವಾಗಿದೆ. ಬಿಹಾರದ 14 ವರ್ಷದ ವೈಭವ್, 2022 ರಲ್ಲಿ ಉಗಾಂಡಾ ವಿರುದ್ಧ 69 ಎಸೆತಗಳಲ್ಲಿ ಶತಕ ಗಳಿಸಿದ್ದ ರಾಜ್ ಅಂಗದ್ ಬಾವಾ ಅವರ ದಾಖಲೆ ಮುರಿದರು. U19 ವಿಶ್ವಕಪ್ ಪಂದ್ಯದಲ್ಲಿ ಅರವತ್ತು ಎಸೆತಗಳ ಅಡಿಯಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೂ ಸೂರ್ಯವಂಶಿ ಪಾತ್ರರಾಗಿದ್ದಾರೆ.

ಒಟ್ಟಾರೆ ಟೂರ್ನಮೆಂಟ್ ದಾಖಲೆಗಳಲ್ಲಿ, U19 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ವೈಭವ್ ಸೂರ್ಯವಂಶಿ ಪಾತ್ರರಾದರು. ಈ ಮೂಲಕ 2022 ರಲ್ಲಿ ಶ್ರೀಲಂಕಾ ವಿರುದ್ಧ 63 ಎಸೆತಗಳಲ್ಲಿ ಶತಕ ಗಳಿಸಿದ ಪಾಕಿಸ್ತಾನದ ಖಾಸಿಮ್ ಅಕ್ರಮ್ ಅವರನ್ನು ಹಿಂದಿಕ್ಕಿದರು.

2026ರ ಆವೃತ್ತಿಯಲ್ಲಿಯೇ ಜಪಾನ್ ವಿರುದ್ಧ 51 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾದ ವಿಲ್ ಮಲಾಜ್‌ಜುಕ್ U19 ವಿಶ್ವಕಪ್‌ನಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

U19 ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ

51 - ವಿಲ್ ಮಲಾಜ್‌ಜುಕ್ (ಆಸ್ಟ್ರೇಲಿಯಾ) vs ಜಪಾನ್, ವಿಂಡ್‌ಹೋಕ್, 2026

55 - ವೈಭವ್ ಸೂರ್ಯವಂಶಿ (ಭಾರತ) vs ಇಂಗ್ಲೆಂಡ್, ಹರಾರೆ, 2026

63 - ಖಾಸಿಮ್ ಅಕ್ರಮ್ (ಪಾಕಿಸ್ತಾನ) vs ಶ್ರೀಲಂಕಾ, ನಾರ್ತ್ ಸೌಂಡ್, 2022

65 - ಬೆನ್ ಮೇಯಸ್ (ಇಂಗ್ಲೆಂಡ್) vs ಸ್ಕಾಟ್, ಹರಾರೆ, 2026

69 - ರಾಜ್ ಬಾವಾ (ಭಾರತ) vs ಉಗಾಂಡಾ, ತರೋಬಾ, 2022

Vaibhav Suryavanshi
U19 World Cup: ಮತ್ತೊಂದು ವಿಶ್ವ ದಾಖಲೆ ಬರೆದ 14 ವರ್ಷದ ವೈಭವ್ ಸೂರ್ಯವಂಶಿ!

ವೈಭವ್ ಸೂರ್ಯವಂಶಿ ಒಟ್ಟಾರೆ 80 ಎಸೆತಗಳಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್‌ಗಳೊಂದಿಗೆ 175 ರನ್ ಗಳಿಸಿದರು. U19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 150 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ರಾಜಾ ಬಾವಾ ಅವರ ದಾಖಲೆ ಸರಿಗಟ್ಟುವುದರ ಜೊತೆಗೆ, ಸೂರ್ಯವಂಶಿ ಒಂದೇ U19 ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಅವರನ್ನು ಹಿಂದಿಕ್ಕಿದರು. ಈ ಪಂದ್ಯಾವಳಿಯಲ್ಲಿ ಸೂರ್ಯವಂಶಿ 30 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 2022ರಲ್ಲಿ ಬ್ರೆವಿಸ್ 18 ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಹೊಂದಿದ್ದರು.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಐಸಿಸಿ U19 ವಿಶ್ವಕಪ್ 2026ರ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತದ ಅಂಡರ್-19 ನಾಯಕ ಆಯುಷ್ ಮ್ಹಾತ್ರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಫೈನಲ್‌ಗೆ ಏರಿದರೆ, ಇಂಗ್ಲೆಂಡ್ ಟೂರ್ನಮೆಂಟ್ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ತಂಡವಾದ ಆಸ್ಟ್ರೇಲಿಯಾವನ್ನು 27 ರನ್‌ಗಳಿಂದ ಸೋಲಿಸಿ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com