

2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ನೆರವಾದರು. ಎಡಗೈ ಆರಂಭಿಕ ಆಟಗಾರ ಕೇವಲ 40 ಎಸೆತಗಳಲ್ಲಿ 77 ರನ್ ಗಳಿಸಿ ಭಾರತಕ್ಕೆ ಅಡಿಪಾಯ ಹಾಕಿದರು. ಕಿಶನ್ ಅವರ ಈ ನಾಕ್ ಅಭಿಮಾನಿಗಳು ಮತ್ತು ತಜ್ಞರಿಂದ ಪ್ರಶಂಸೆಗೆ ಪಾತ್ರವಾಯಿತು. ಇಶಾನ್ ಕಿಶನ್ ಅವರ ತಾತ ಅವರ ರಿಲೇಷನ್‌ಶಿಪ್ ಬಗ್ಗೆ ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ಅವರ ತಾಯಿ ಸುಚಿತ್ರಾ ದೇವಿ ಈ ವದಂತಿಗಳನ್ನು ನಿರಾಕರಿಸಿದ್ದು, ಆಟದ ಮೇಲೆ ಗಮನಹರಿಸಲು ಇದು ಸೂಕ್ತ ಸಮಯ ಎಂದು ಹೇಳಿದರು.
'ಈಗ ಮದುವೆಯ ಬಗ್ಗೆ ಅಲ್ಲ, ಅವನಿಗೆ ಕ್ರಿಕೆಟ್ ಆಡುವ ಸಮಯ. ಅವನಿಗೆ ಮದುವೆಯ ಬಗ್ಗೆ ಮಾತನಾಡುವಷ್ಟು ವಯಸ್ಸಾಗಿಲ್ಲ. ಅಜ್ಜನಿಗೆ ಸ್ವಲ್ಪ ವಯಸ್ಸಾಗುತ್ತಿದೆ. ವೃದ್ಧರು ಯಾವಾಗಲೂ ಸ್ವಲ್ಪ ಉತ್ಸುಕರಾಗಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಏನಾದರೂ ಬರುತ್ತಲೇ ಇರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ಆಧಾರದ ಮೇಲೆ ಅವರು ಇದನ್ನೆಲ್ಲ ಹೇಳಿದರು' ಎಂದು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಕಿಶನ್ ಅವರ ತಾತ ಅನುರಾಗ್ ಪಾಂಡೆ, ತಮ್ಮ ಮೊಮ್ಮಗ ಮಾಡೆಲ್ ಅದಿತಿ ಹುಂಡಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ. ಅವರು ಮದುವೆಯಾಗಲು ಬಯಸಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
'ಇಶಾನ್ ಯಾರನ್ನು ಮದುವೆಯಾಗಲು ಆಯ್ಕೆ ಮಾಡಿದರೂ, ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಇಶಾನ್ ಕಿಶನ್ ಯಾರನ್ನು ಮದುವೆಯಾಗಲು ಬಯಸುತ್ತಾರೋ ಅವರನ್ನು ನಾವು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಅದಿತಿ ಆತನ ಗೆಳತಿ. ಆಕೆ ಒಬ್ಬ ಮಾಡೆಲ್. ಮಕ್ಕಳು ಸಂತೋಷಗೊಳ್ಳುವ ವಿಚಾರವನ್ನು ಪೋಷಕರು ಒಪ್ಪಿಕೊಳ್ಳಬೇಕು' ಎಂದು ಅವರು ANI ಗೆ ತಿಳಿಸಿದರು.
ಪಾಕಿಸ್ತಾನ ವಿರುದ್ಧದ ಅದ್ಭುತ ಪ್ರದರ್ಶನದ ನಂತರ, ಕಿಶನ್, ಪಂದ್ಯಶ್ರೇಷ್ಠ ಪ್ರಶಸ್ತಿ ತಮಗೆ ಮಾತ್ರವಲ್ಲ, ಭಾರತದ ಎಲ್ಲ ಅಭಿಮಾನಿಗಳಿಗೆ ಮತ್ತು ಇಡೀ ತಂಡಕ್ಕೆ ಸಲ್ಲುತ್ತದೆ ಎಂದು ಹೇಳಿದರು.
Advertisement