'ನಿಯಂತ್ರಣದಲ್ಲಿಟ್ಟುಕೊಳ್ಳುವ ಅಗತ್ಯವಿದೆ': ಆರಂಭಿಕರಾದ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಮೇಲೆ ಕಣ್ಣಿಟ್ಟ BCCI!

ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ, ಸೂರ್ಯವಂಶಿ 23 ಪಂದ್ಯಗಳಲ್ಲಿ 44.69ರ ಸರಾಸರಿ ಮತ್ತು 228.95ರ ಸ್ಟ್ರೈಕ್ ರೇಟ್‌ನಲ್ಲಿ 1,028 ರನ್ ಗಳಿಸಿದ್ದಾರೆ. 96 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
Abhishek Sharma - Vaibhav Sooryavanshi
ಭಿಷೇಕ್ ಶರ್ಮಾ - ವೈಭವ್ ಸೂರ್ಯವಂಶಿ
Updated on

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20ಐ ಸರಣಿಯಲ್ಲಿ ಭಾರತದ ಪ್ರದರ್ಶನವನ್ನು ಬಿಸಿಸಿಐ (BCCI) ಸೂಕ್ಷ್ಮವಾಗಿ ಗಮನಿಸುತ್ತಿದೆ. ಮಂಡಳಿಯ ಮೂಲವೊಂದರ ಪ್ರಕಾರ, ಆರಂಭಿಕ ಜೋಡಿಯಾದ ಅಭಿಷೇಕ್ ಶರ್ಮಾ ಮತ್ತು 15 ವರ್ಷದ ಪ್ರತಿಭಾವಂತ ಆಟಗಾರ ವೈಭವ್ ಸೂರ್ಯವಂಶಿ ಅವರ ಆಟ ಹಾಗೂ ಸಿಕ್ಸರ್‌ ಬಾರಿಸುವ ಅವರ ಸಾಮರ್ಥ್ಯದ ಮೇಲೆ ಕಣ್ಣಿಡಲಾಗಿದೆ.

ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ ಅವರಿಂದ ಶ್ರೇಯಸ್ ಅಯ್ಯರ್ ನಾಯಕತ್ವವನ್ನು ವಹಿಸಿಕೊಂಡಾಗಿನಿಂತ ಭಾರತ ಒಂದೇ ಒಂದು ಟಿ20ಐ ಪಂದ್ಯದಲ್ಲಿ ಗೆದ್ದಿಲ್ಲ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಘಾತಕಾರಿ 2-0 ಅಂತರದ ಸೋಲಿನ ನಂತರ, ಸದ್ಯ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯಲ್ಲಿ ಭಾರತ 3-0 ಅಂತರದಿಂದ ಹಿನ್ನಡೆಯಲ್ಲಿದೆ; ಹೀಗಾಗಿ ಅಯ್ಯರ್ ನಾಯಕತ್ವದಲ್ಲಿ ತಂಡವು ತನ್ನ ಮೊದಲ ಗೆಲುವಿಗಾಗಿಯೇ ಇನ್ನೂ ಹುಡುಕಾಟ ನಡೆಸುತ್ತಿದೆ.

'ಅಭಿಷೇಕ್ ಮತ್ತು ಸೂರ್ಯವಂಶಿ ಅವರ ಸಿಕ್ಸರ್ ಬಾರಿಸುವ ಸಾಮರ್ಥ್ಯ ಅದ್ಭುತವಾಗಿದೆ. ಆದರೆ, ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅಗತ್ಯವಿದೆ' ಎಂದು ಬಿಸಿಸಿಐ ಮೂಲವೊಂದು ಒಪ್ಪಿಕೊಂಡಿದೆ.

ಅಭಿಷೇಕ್ ಮತ್ತು ಸೂರ್ಯವಂಶಿ ಅವರ ಸಿಕ್ಸರ್‌ಗಳನ್ನು ಹೊಡೆಯುವ ಸಾಮರ್ಥ್ಯ ಪ್ರಭಾವಶಾಲಿಯಾಗಿದ್ದರೂ, ಅವರು ಉತ್ತಮ ಶಾಟ್ ಆಯ್ಕೆಯನ್ನು ಕಲಿಯಬೇಕು ಮತ್ತು ಅವರ ಆಕ್ರಮಣಕಾರಿ ವಿಧಾನವನ್ನು ನಿಯಂತ್ರಿಸಬೇಕು ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ.

Abhishek Sharma - Vaibhav Sooryavanshi
ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿನ ಬಳಿಕ ವೈಭವ್ ಸೂರ್ಯವಂಶಿ ಜೊತೆ ಬಿಸಿ ಬಿಸಿ ಚರ್ಚೆ ನಡೆಸಿದ ಗೌತಮ್ ಗಂಭೀರ್!

1989ರಲ್ಲಿ ಸಚಿನ್ ತೆಂಡೂಲ್ಕರ್ ಸ್ಥಾಪಿಸಿದ್ದ ದೀರ್ಘಕಾಲದ ದಾಖಲೆಯನ್ನು ಮುರಿದು, 15 ವರ್ಷ ಮತ್ತು 99 ದಿನಗಳ ವಯಸ್ಸಿನಲ್ಲಿ ಪುರುಷರ ಹಿರಿಯ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗನಾದ ಸೂರ್ಯವಂಶಿ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 13 ಮತ್ತು 15 ರನ್‌ಗಳನ್ನು ಗಳಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ 2026ರ ಐಪಿಎಲ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದ ಬಳಿಕ ಸೂರ್ಯವಂಶಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. ಈ ಟೂರ್ನಿಯಲ್ಲಿ ಅವರು ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ, ಬರೋಬ್ಬರಿ 237.30ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 776 ರನ್ ಕಲೆಹಾಕಿದರು. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಲ್ಲದೆ, ದಾಖಲೆಯ 72 ಸಿಕ್ಸರ್‌ಗಳನ್ನು ಸಿಡಿಸಿದರು.

ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ, ಸೂರ್ಯವಂಶಿ 23 ಪಂದ್ಯಗಳಲ್ಲಿ 44.69ರ ಸರಾಸರಿ ಮತ್ತು 228.95ರ ಸ್ಟ್ರೈಕ್ ರೇಟ್‌ನಲ್ಲಿ 1,028 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಆರು ಅರ್ಧಶತಕಗಳು ಮತ್ತು 103 ಅವರ ಅತ್ಯುತ್ತಮ ಸ್ಕೋರ್ ಸೇರಿದೆ. ಅವರು 96 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ ಎ ತಂಡಗಳ ನಡುವಿನ ತ್ರಿಕೋನ ಸರಣಿಯಲ್ಲಿ, ಸೂರ್ಯವಂಶಿ ಐದು ಇನಿಂಗ್ಸ್‌ಗಳಲ್ಲಿ 42.20 ಸರಾಸರಿ ಮತ್ತು 201ರ ಸ್ಟ್ರೈಕ್ ರೇಟ್‌ನೊಂದಿಗೆ 211 ರನ್ ಗಳಿಸಿದರು. ಅವರ ಅತ್ಯುತ್ತಮ ಸ್ಕೋರ್ 94 ಆಗಿದೆ. ಫೈನಲ್‌ನಲ್ಲಿ ಅವರ ಏಕೈಕ ಅರ್ಧಶತಕ ಬಂತು. ಶ್ರೀಲಂಕಾ ಎ ವಿರುದ್ಧ 11 ಎಸೆತಗಳಲ್ಲಿ ಲಿಸ್ಟ್ ಎ ತಂಡದ ವೇಗದ ಅರ್ಧಶತಕ ಗಳಿಸಿದರು.

ಮತ್ತೊಂದೆಡೆ, ಅಭಿಷೇಕ್ ಉತ್ತಮ ಪ್ರದರ್ಶನ ನೀಡಿದ್ದರೂ, ಅವರ ಪಾಲಿಗೆ ವೈಫಲ್ಯಗಳೂ ಎದುರಾಗಿವೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ, ಅವರು ಆಡಿದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 49 ಮತ್ತು 0 ರನ್ ಗಳಿಸಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ ಇಲ್ಲಿಯವರೆಗೆ 59, 43, 10 ಮತ್ತು 16 ರನ್ ಗಳಿಸಿರುವ ಅವರು, ಭಾರತದ ಉತ್ತಮ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಆದಾಗ್ಯೂ, ಪಂದ್ಯವನ್ನು ಗೆಲ್ಲಿಸಿಕೊಡುವಂತಹ ಅವರ ಬ್ಯಾಟಿಂಗ್ ಪ್ರಭಾವವು ಇಲ್ಲಿಯವರೆಗೆ ಕಂಡುಬಂದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com