ಮತ್ತೆ ಮಳೆ ಆಟ

ಗುಲ್ಬರ್ಗ: ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆ ಭಾನುವಾರ ಕೊಂಚ ಕಡಿಮೆಯಾದಂತೆ ಕಂಡರೂ ಸಂಜೆ ವೇಳೆ ಮತ್ತೆ ವರುಣನ ಅಬ್ಬರ ಶುರುವಾಗಿದೆ. ರಾಯಚೂರು, ಬೀದರ್, ಯಾದಗಿರಿ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ ಆರ್ಭಟ ಜೋರಾಗಿತ್ತು. ಭಾನುವಾರ ಆಗಸದಲ್ಲಿ ಸೂರ್ಯ ಕಾಣಿಸಿಕೊಂಡಿದ್ದರಿಂದ ಜನ ನಿಟ್ಟುಸಿರುಬಿಟ್ಟರು. ಆದರೆ ಸಂಜೆ ವೇಳೆ ಪುನಃ ಬಿರುಸಿನ ಮಳೆ ಶುರುವಾಗಿದೆ.
ಮನೆಗಳ ಭಾಗಶಃ ಹಾನಿ ಹಾಗೂ ಕುಸಿತದಿಂದ ಸಂತ್ರಸ್ತರಾದವರಿಗೆ ಆಯಾ ಸ್ಥಳೀಯ ಪಂಚಾಯಿತಿಗಳಿಂದ ತಾತ್ಕಾಲಿಕ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಜಿಲ್ಲಾಡಳಿತಗಳು ಜನರಿಗೆ ಸಹಾಯಹಸ್ತ ಚಾಚಿದ್ದು ಪರಿಹಾರ ಕಾರ್ಯಗಳು ಭರದಿಂದ ಸಾಗಿವೆ. ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ 2 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದ ಹತ್ತಿ, ತೊಗರಿ, ಸಜ್ಜೆ, ಶೇಂಗಾ, ಜೋಳ, ಮೆಣಸಿನಕಾಯಿ, ಬತ್ತ, ಕಬ್ಬು, ಸೋಯಾಬೀನ್, ಮತ್ತಿತರ ತರಕಾರಿ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ.
ಹೊಲಗಳಲ್ಲಿ ನೀರು ನಿಂತಿದ್ದರಿಂದ ಕೊಳೆಯುವ ಹಂತ ತಲುಪಿವೆ. ರಾಯಚೂರು ಜಿಲ್ಲೆಯಲ್ಲಿ ಸದ್ಯ 2,175 ಎಕರೆ ಪ್ರದೇಶದ ಬೆಳೆ, 1,297 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 50 ಮನೆಗಳು ಸಂಪೂರ್ಣ ಕುಸಿತ ಕಂಡಿದ್ದು ಜಿಲ್ಲಾಡಳಿತವು ಅತಿವೃಷ್ಟಿ ಹಾನಿ ರು.61.5 ಕೋಟಿ ಎಂದು ಅಂದಾಜಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


