ಜಿಲ್ಲಾ ಸುದ್ದಿ

ತೀರ್ಥಹಳ್ಳಿ ಬಾಲಕಿ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್

ತೀರ್ಥಹಳ್ಳಿ ಬಾಲಕಿ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್
Published On :

ಶಿವಮೊಗ್ಗ: ಅಕ್ಟೋಬರ್ ೩೧ ರಂದು ನಿಧನಳಾದ ತೀರ್ಥಹಳ್ಳಿ ಶಾಲಾ ಬಾಲಕಿ ನಂದಿತಾ ಮೇಲೆ ಯಾವುದೇ ರೇಪ್ ನಡೆದಿಲ್ಲ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಅವರ ತಂದೆ ದಾಖಲಿಸಿರುವ ದೂರಿನಲ್ಲೂ ರೇಪಿನ ಪ್ರಸ್ತಾಪ ಇಲ್ಲ, ಆದರೆ ಕೊಲ್ಲಲು ಯತ್ನಿಸಿದ್ದರು ಎಂದು ದೂರು ಕೊಟ್ಟಿದ್ದಾರೆ.

ಹುಡುಗಿಯ ಶಾಲಾ ಚೀಲದಲ್ಲಿ 'ಡೆತ್ ನೋಟ್' ಸಿಕ್ಕಿದೆ ಎಂದು ಹೇಳಿರುವ ಪೊಲೀಸರು, ರೇಪ್ ಅಥವಾ ಕೊಲೆ ಯತ್ನ ನಡೆದಿದೆ ಎಂಬ ಆಪಾದನೆಯನ್ನು ತಳ್ಳಿಹಾಕಿ ಇದು ಆತ್ಮಹತ್ಯಾ ಪ್ರಕರಣ ಎಂದು ಹೇಳಿರುವುದು, ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಸಂಘ ಪರಿವಾರದವರು ಒಂದು ಕೋಮಿನ ಮೇಲೆ ಆಪಾದನೆ ಮಾಡಿ ರಾಜಕೀಯ ವಿವಾದ ಎಬ್ಬಿಸಿದ್ದರಿಂದ ಕೋಮು ಉದ್ವೇಗದ ವಾತಾವರಣ ತೀರ್ಥಹಳ್ಳಿಯನ್ನು ಸುತ್ತುವರೆದಿತ್ತು. ನವೆಂಬರ್ ೩ ರವರೆಗೆ ತೀರ್ಥಹಳ್ಳಿಯ ಎಲ್ಲ ಶಾಲೆಗಳಿಗೂ ರಜಾ ಕೊಟ್ಟು, ತೀರ್ಥಹಳ್ಳಿ ಮತ್ತು ಸುತ್ತಮುತ್ತ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ನವೆಂಬರ್ ೧೦ ರವೆರೆಗೆ ಸೆಕ್ಷನ್ ೧೪೪ ಜಾರಿ ಮಾಡಿದೆ.

ಅಲ್ಲಿನ ಶಾಸಕ ಮತ್ತು ರಾಜ್ಯ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವದಂತಿಗಳನ್ನು ಹಬ್ಬಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಜನರನ್ನು ಖಂಡಿಸಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.