ಜಿಲ್ಲಾ ಸುದ್ದಿ

ಬಿಬಿಎಂಪಿಯಲ್ಲಿ ಪ್ರಶಸ್ತಿಗೂ ಕಿಮ್ಮತ್ತಿಲ್ಲ

ಬಿಬಿಎಂಪಿಯಲ್ಲಿ ಪ್ರಶಸ್ತಿಗೂ ಕಿಮ್ಮತ್ತಿಲ್ಲ
Published On :

ಪಾಲಿಕೆಗೆ ಅಂತಾರಾಷ್ಟ್ರೀಯ ಗೌರವ, ಆದರೆ ಸ್ವೀಕರಿಸುವವರೇ ಇಲ್ಲ!
ಬೆಂಗಳೂರು: ಕಾಸಿಲ್ಲದೆ ಕಷ್ಟದಲ್ಲಿರುವ ಬಿಬಿಎಂಪಿಗೆ ಅಂತಾರಾಷ್ಟ್ರೀಯ ಸನ್ಮಾನ ಸಿಗುತ್ತಿದೆ. ಆದರೆ ಅದನ್ನು ಸ್ವೀಕರಿಸುವವರೇ ಇಲ್ಲ!
ಇ-ಆಡಳಿತ ಸದ್ಭಳಕೆ ವಿಚಾರದಲ್ಲಿ ಬಿಬಿಎಂಪಿಗೆ ವರ್ಲ್ಡ್ ಇ-ಗವರ್ನೆನ್ಸ್ ಪ್ರಶಸ್ತಿ ಲಭಿಸಿದೆ. ಆದರೆ ಇದರ ಮಹತ್ವ ಬಿಬಿಎಂಪಿಗೆ ತಿಳಿಯಲೇ ಇಲ್ಲ. ಆ ಪ್ರಶಸ್ತಿಯನ್ನು ಪಡೆಯಲೂ ಮುಂದಾಗಿಲ್ಲ. ಕಷ್ಟ ಕಾಲದ ನೆಪದಲ್ಲಿ ಪ್ರಶಸ್ತಿ ಸ್ವೀಕರಿಸಲು ಯಾರನ್ನೂ ಕಳುಹಿಸುವುದೇ ಎಂದು ಬಿಬಿಎಂಪಿ ನಿರ್ಧರಿಸಿದೆ. ಸದಸ್ಯರ ಒತ್ತಾಯದ ಮೇರೆಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗುವ ಪ್ರಸ್ತಾಪದ ಬಗ್ಗೆ ಸರ್ಕಾರಕ್ಕೆ ಹೋಗುವ ಪ್ರಸ್ತಾಪದ ಬಗ್ಗೆ ಸರ್ಕಾರಕ್ಕೆ ಪತ್ರ ಕಳುಹಿಸಿ ಕೈ ತೊಳೆದು ಕೊಂಡಿದೆ. ಹೀಗಾಗಿ ನ.5 ರಂದು ಚೀನಾದಲ್ಲಿ ನಡೆಯುವ ಸಮಾರಂಭಕ್ಕೆ ಬಿಬಿಎಂಪಿಯಿಂದ ಪ್ರತಿನಿಧಿಗಳು ಹೋಗುವುದೇ ಅನುಮಾನ.
ರಸ್ತೆಗಳ ಅಭಿವೃದ್ಧಿಯಲ್ಲಿನ ಅಕ್ರಮ ತಡೆಯಲು ಇ-ಆಡಳಿತ ಬಳಸುವ ಪ್ರಯತ್ನಕ್ಕೆ ಬಿಬಿಎಂಪಿ ಹಿಂದೆಯೇ ಕೈ ಹಾಕಿತ್ತು. ರಸ್ತೆ ಕಾಮಗಾರಿ ವೆಚ್ಚದ ಮಾಹಿತಿ ಸಿಗುವಂತಾಗಲು 'ರೋಡ್ ಹಿಸ್ಟರಿ ತಂತ್ರಜ್ಞಾನ ಅಳವಡಿಸುತ್ತಿದೆ. ಈ ಪ್ರಯೋಗದ ಬಗ್ಗೆ ಬಿಬಿಎಂಪಿ ದಕ್ಷಿಣ ಕೊರಿಯಾ ಮೂಲದ ಏಗೋ ವರ್ಲ್ಡ್ ಇ-ಗವರ್ನೆನ್ಸ್ ಸಂಸ್ಥೆಗೆ ಮಾಹಿತಿ ನೀಡಿತ್ತು. ಇದನ್ನಾಧರಿಸಿ ವರ್ಲ್ಡ್ ಇ-ಗವರ್ನೆನ್ಸ್ ಸಂಸ್ಥೆ ಪರಿಶೀಲನೆ ನಡೆಸಿ ಬಿಬಿಎಂಪಿಯನ್ನು ಎಫಿಷಿಯೆನ್ಸಿ ವಿಭಾಗದಲ್ಲಿ ಇ-ಗವರ್ನೆನ್ಸ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಏನಿದು ರೋಡ್ ಹಿಸ್ಟರಿ?
ಬಿಬಿಎಂಪಿ ಬಜೆಟ್‌ನ ಬಹುಭಾಗ ರಸ್ತೆಗಳ ನಿರ್ಮಾಣಕ್ಕೆ ವೆಚ್ಚವಾಗುತ್ತದೆ. ಆ ರಸ್ತೆಗಳಲ್ಲಿ ಬೆಸ್ಕಾಂ ಎಷ್ಟು ಕೇಬಲ್, ಜಲಮಂಡಳಿ ಎಷ್ಟು ಪೈಪ್‌ಲೈನ್ ಹಾಕಿದೆ. ಅದಕ್ಕಾಗಿ ರಸ್ತೆಯನ್ನು ಎಷ್ಟು ಕತ್ತರಿಸಿದೆ ಎನ್ನುವ  ಮಾಹಿತಿ ಸಿಗುತ್ತಿರಲ್ಲ, ಇದನ್ನು ಪತ್ತೆ ಮಾಡುವುದಕ್ಕಾಗಿಯೇ ಆಯುಕ್ತರಾಗಿದ್ದ ಸಿದ್ದಯ್ಯ ಪ್ರತಿ ರಸ್ತೆಗೆ ಮಾಡಿರುವ ವೆಚ್ಚ, ಆಗಿರುವ ಅಭಿವೃದ್ಧಿಯನ್ನು ದಾಖಲೆಯಾಗಿಡುವ ಪ್ರಯತ್ನಕ್ಕೆ ಕೈ ಹಾಕಿದರು.
ಅದರಂತೆ ಪ್ರತಿ ರಸ್ತೆಯ ಕಾಮಗಾರಿ ವೆಚ್ಚ, ಆ ರಸ್ತೆಯಲ್ಲಿ ಹಾದು ಹೋಗಿರುವ ಬೆಸ್ಕಾಂ ಕೇಬಲ್, ಒಎಫ್‌ಸಿ ಮತ್ತು ಜಲಮಂಡಳಿ ಪೈಪ್‌ಲೈನ್‌ನ ಮಾಹಿತಿಗಳನ್ನು ಪ್ರತ್ಯೇಕ ತಂತ್ರಾಂಶದ ಮೂಲಕ ಸಂಗ್ರಹಿಸಲಾಗಿದೆ. ಹೀಗೆ ಪೂರ್ಣ ಮಾಹಿತಿ ಇರುವ ರಸ್ತೆಗೆ ಒಂದು ಸಂಖ್ಯೆ ನೀಡಲಾಗಿದೆ. ಆ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿದರೆ. ಆ ರಸ್ತೆಯ ಸಂಪೂರ್ಣ ಮಾಹಿತಿ ಕ್ಷಣದಲ್ಲೇ ಲಭ್ಯವಾಗುತ್ತದೆ.

ಏನಿದು ಪ್ರಶಸ್ತಿ?
ವಿಗೋ ವರ್ಲ್ಡ್ ಇ-ಗವರ್ನೆನ್ಸ್ ಸಂಸ್ಥೆ ವಿಶ್ವದ 92 ಮಹಾನಗರಗಳನ್ನು ಒಳಗೊಂಡ ದೊಡ್ಡ ಒಕ್ಕೂಟ ರಚಿಸಿದೆ. ಬಾರ್ಸಿಲೋನಾ, ಅಂಟ್ಲಾಟಿಸ್, ಪ್ಯಾರಿಸ್, ಬೆಂಗಳೂರು ಸೇರಿದಂತೆ ಅನೇಕ ಮಹಾನಗರಗಳು ಒಕ್ಕೂಟದಲ್ಲಿದ್ದು, ಈ ನಗರಗಳು ಇ-ಆಡಳಿತದಲ್ಲಿದ್ದು. ಈ ನಗರಗಳು ಇ-ಆಡಳಿತವನ್ನು ಸದ್ಭಳಕೆ ಮಾಡಿಕೊಂಡರೆ ಅವುಗಳನ್ನು ವಿವಿಧ ವಿಭಾಗಗಳಲ್ಲಿ ಪರಿಶೀಲಿಸಿ ಪ್ರಶಸ್ತಿ ನೀಡಲಾಗುತ್ತದೆ. ಅದೇ ವಿಶ್ವ ಇ-ಆಡಳಿತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಪ್ರತಿವರ್ಷ ಒಕ್ಕೂಟದಲ್ಲಿರುವ ಒಂದೊಂದು ಮಹಾನಗರದಲ್ಲಿ ಪ್ರದಾನ ಮಾಡಲಾಗುತ್ತದೆ. ಅದೇ ರೀತಿ ಈ ಬಾರಿ ಚೀನಾದ ಚೆಂಗುಡು ಮಹಾನಗರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

 ಶಿವಕುಮಾರ್ ಬೆಳ್ಳಿತಟ್ಟೆ



 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.