ಆಧಾರ್ಗಿನ್ನು ಕಾಯಂ ಪಟ್ಟ

ಬೆಂಗಳೂರು: ರಾಜ್ಯದಲ್ಲಿ ಆಧಾರ್ಗೆ ಇನ್ನುಮುಂದೆ 'ಕಡ್ಡಾಯ' ಸ್ಥಾನಕ್ಕಿಂತ 'ಕಾಯಂ' ಪಟ್ಟ ಸಿಗಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಜನಧನ ಯೋಜನೆಗೆ ಇನ್ನು ಆಧಾರ್ ಗುರುತಿನ ಸಂಖ್ಯೆಯೇ ಆಧಾರವಾಗಲಿದ್ದು, ಇದಕ್ಕಾಗಿ ರಾಜ್ಯದಲ್ಲಿ ಶಾಶ್ವತ ಆಧಾರ್ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಈ ಮೂಲಕ ಜನ್ಧನ್ ಯೋಜನೆ ಖಾತೆ ತೆರೆಯಲು ಆಧಾರ್ ಸಂಖ್ಯೆ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ.
ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳಿಗೆ ಒದಗಿಸುವ ಆರ್ಥಿಕ ನೆರವುಗಳು ಇದೇ ಖಾತೆ ಮೂಲಕ ನಡೆಯುವುದರಿಂದ ಅವರ ಪೂರ್ಣ ವಿಳಾಸ ಮತ್ತು ವಿವರ ಇರುವ ಆಧಾರ್ ಹೆಚ್ಚಿನ ಆಧಾರ ಒದಗಿಸಲಿದೆ.
ಆಧಾರ್ ಬಳಕೆಯನ್ನು ಹೆಚ್ಚಿಸುವಂತೆ ಕೇಂದ್ರ ಯುಐಡಿ(ಯೂನಿಕ್ ಐಡೆಂಟಿಫಿಕೇಷನ್) ಸಂಸ್ಥೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇದನ್ನಾಧರಿಸಿ ರಾಜ್ಯ ಇ-ಆಡಳಿತ ಇಲಾಖೆ ಆಧಾರ್ ನೋಂದಣಿ ಚುರುಕುಗೊಳಿಸಲು ಮುಂದಾಗಿದೆ.
ನೋಂದಣಿ ಹಣ ಬ್ಯಾಂಕ್ಗಳಿಗೆ: ರಾಜ್ಯದಲ್ಲಿ ತೀವ್ರಗತಿಯಲ್ಲಿ ನೋಂದಣಿಯಾಗುತ್ತಿದ್ದ ಆಧಾರ್ ವಿಚಾರ ಕೋರ್ಟ್ ಮೆಟ್ಟಿಲೇರಿದ್ದರಿಂದ ಕೊಂಚ ಮಂಕಾಗಿತ್ತು. ಕೇಂದ್ರದ ಯುಐಡಿ ರಾಜ್ಯದ ಇ-ಆಡಳಿತ ಇಲಾಖೆ ನೆರವಿನೊಂದಿಗೆ 2.500ಕ್ಕೂ ಹೆಚ್ಚಿನ ತಂಡಗಳನ್ನು ನಿಯೋಜಿಸಿ ನೋಂದಣಿ ಮಾಡಿಸುತ್ತಿತ್ತು. ಆದರೆ ನೋಂದಣಿ ಗುತ್ತಿಗೆ ಹೊತ್ತಿದ್ದ ವಿಪ್ರೋ, ಶ್ರೀವಾನ್, ಮಾರ್ಸ್, ಟೆರ್ರಾ ಸಾಫ್ಟ್ ಸಂಸ್ಥೆಗಳ ಗುತ್ತಿಗೆ ಅವಧಿ ಏಪ್ರಿಲ್ನಲ್ಲೇ ಮುಕ್ತಾಯವಾಗಿದೆ.
ಸದ್ಯ 4.80 ಕೋಟಿ ಜನರನ್ನು ಆಧಾರ್ ವ್ಯಾಪ್ತಿಗೆ ತರಲಾಗಿದ್ದು, 4.2 ಕೋಟಿ ಜನರಿಗೆ ಕಾರ್ಡ್ ನೀಡಲಾಗಿದೆ. ಇನ್ನುಳಿದ 1.20 ಕೋಟಿ ಮಂದಿ ನೋಂದಣಿ ಮಾಡಬೇಕಿದ್ದು, ಇಧಕ್ಕಾಗಿ ನೋಂದಣಿ ಕೇಂದ್ರ ತೆರೆಯಬೇಕಿದೆ.
ಈ ಕೆಲಸವನ್ನು ಯುಐಡಿ ಸಂಸ್ಥೆ ಸದ್ಯಕ್ಕೆ 7 ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ವಹಿಸಿದೆ. ಇನ್ನು ಮುಂದೆ ಫಲಾನುಭವಿಗಳಿಗೆ ನೀಡುವ ಎಲ್ಲಾ ರೀತಿಯ ಆರ್ಥಿಕ ಸೌಲಭ್ಯವನ್ನು ಬ್ಯಾಂಕ್ಗಳ ಮೂಲಕವೇ ನೀಡಲು ಚಿಂತಿಸಲಾಗಿದೆ.
ಇದಕ್ಕೆ ಪೂರಕವಾಗಿ ಆಧಾರ್ ನೋಂದಣಿ ಹೆಚ್ಚಿಸಲು ಬ್ಯಾಂಕ್ಗಳು ಕಾರ್ವಿ ವಿ.ಟಿ ಸಲ್ಯೂಷನ್, ಫಿನೋ ಎಂಬ ಸಂಸ್ಥೆಗಳ ಜತೆ ಸಜ್ಜಾಗುತ್ತಿದೆ. ಬ್ಯಾಂಕ್ ಜಾಲದ ಸುಮಾರು 300 ತಂಡಗಳು ಈಗ ಆಧಾರ್ ನೋಂದಣಿಗೆ ಸಿದ್ಧವಾಗಿದ್ದು, ಇದರೊಂದಿಗೆ ಇನ್ನೂ 200 ತಂಡಗಳನ್ನು ಹೆಚ್ಚುವರಿಯಾಗಿ ಒದಗಿಸಲು ಇ-ಆಡಳಿತ ನಿರ್ಧರಿಸಿದೆ.
ಮುಂದಿನ ಐದು ತಿಂಗಳಲ್ಲಿ ಆಧಾರ್ ನೋಂದಣಿಯನ್ನು ಮಿತಿ ಮೀರಿ ಸಾಧಿಸಬೇಕೆಂದು ನಿಶ್ಚಯಿಸಲಾಗಿದೆ. ಇದಕ್ಕಾಗಿ ಗತ್ಯ ಸಿಬ್ಬಂದಿ ವ್ಯವಸ್ಥೆ ಮಾಡಲಾಗುತ್ತಿದ್ದು, ಗ್ರಾಪಂಗಳ ನೆರವಿನೊಂದಿಗೆ ಶಾಶ್ವತ ಆಧಾರ್ ಕೇಂದ್ರ ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತಿದೆ.
-ರತನ್ ಖೇಲ್ಕರ್
ಆಧಾರ್ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಅಟಲ್ ಜೀ ಆಧಾರ್!
2015ರ ಜನವರಿ ವೇಳೆಗೆ ಆಧಾರ್ ನೋಂದಣಿಯನ್ನು 5 ಕೋಟಿಗೆ ಏರಿಸುವ ಚಿಂತನೆಯಲ್ಲಿರುವ ಕೇಂದ್ರ ಮುಂದಿನ 6 ತಿಂಗಳಲ್ಲಿ ಎಲ್ಲರಿಗೂ ಆಧಾರ್ ಕಾರ್ಡ್ ಸಿಗುವಂತೆ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ತಾತ್ಕಾಲಿಕ 500 ಸೇವಾ ಕೇಂದ್ರಗಳನ್ನು ತೆರೆಯುವ ಜತೆಗೆ ಶಾಶ್ವತ ಆಧಾರ್ ಕೇಂದ್ರಗಳನ್ನೂ ತೆರೆಯಲು ನಿರ್ಧರಿಸಿದೆ. ರಾಜ್ಯದಲ್ಲಿರುವ 900 ಅಟಲ್ ಜೀ ಜನಸ್ನೇಹಿ ಕೇಂದ್ರಗಳು ಹಾಗೆಯೇ 92 ಬೆಂಗಳೂರು ಒನ್ಗಳು, 40 ಕರ್ನಾಟಕ ಒನ್ಗಳನ್ನು ಬಳಸಿಕೊಳ್ಳಲು ಮುಂದಾಗಿದೆ.
-ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


