ಮೆಟ್ರೋ ಸಂಚಾರ ಸಮಯ ಬದಲು

ಬೆಂಗಳೂರು: ಸಂಪಿಗೆ ರಸ್ತೆ ನಿಲ್ಧಾಣದಿಂದ ಪೀಣ್ಯ ಕೈಗಾರಿಕಾ ನಗರದ ನಿಲ್ಧಾಣದ ನಡುವೆ ಸಂಚರಿಸುವ ನಮ್ಮ ಮೆಟ್ರೋ ರೈಲ್ವೆ ಸಮಯವನ್ನು ಅ.12ರಿಂದ 25ರವರೆಗೆ ಬದಲಿಸಲಾಗಿದೆ.
ಪೀಣ್ಯ ಕೈಗಾರಿಕಾ ವಲಯದ ನಿಲ್ಧಾಣ ಹಾಗೂ ಜಾಲಹಳ್ಳಿ ನಿಲ್ಧಾಣಗಳಲ್ಲಿ ಅಂತಿಮ ಹಂತದ ಕಾಮಗಾರಿ ನಡೆಯಲಿರುವುದರಿಂದ ತಾತ್ಕಾಲಿಕವಾಗಿ ಸಮಯ ಬದಲಿಸಲಾಗಿದೆ. ಅ.12ರಂದು ಯಶವಂತಪುರ-ಪೀಣ್ಯ ಕೈಗಾರಿಕಾ ವಲಯ ಮಾರ್ಗದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ 15 ನಿಮಿಷಗಳ ಅಂತರದಲ್ಲಿ ಹಾಗೂ ಮತ್ತೊಂದು ರೈಲು ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಸಂಚರಿಸಲಿದೆ.
ಅ.13ರಿಂದ 15ರವರೆಗೆ ಯಶವಂತಪುರ-ಪೀಣ್ಯ ಕೈಗಾರಿಕಾ ವಲಯ ಮಾರ್ಗದಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ 15 ನಿಮಿಷಗಳ ಅಂತರದಲ್ಲಿ ರೈಲುಗಳು ಚಲಿಸಲಿವೆ.
ಅ.16ರಿಂದ 25ರವರೆಗೆ ಪೀಣ್ಯ ಕೈಗಾರಿಕಾ ವಲಯ-ಸಂಪಿಗೆ ರಸ್ತೆ ನಿಲ್ದಾಣ ಮಾರ್ಗವಾಗಿ 10 ನಿಮಿಷಗಳ ಅಂತರದಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಮೆಟ್ರೋ ರೈಲು ಸಂಚರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


