ಪಾಸ್‌ವರ್ಡ್ ಖದೀಮರು!

ಕೊಪ್ಪಳ: ಶಿಕ್ಷಣ ಇಲಾಖೆಯ ಪಾಸ್‌ವರ್ಡ್ ಮಾರಾಟಕ್ಕೆ ಇದೆ!.
ಈ ಪಾಸ್‌ವರ್ಡ್ ಖರೀದಿ ಮಾಡಿದ್ರೆ ನಿಮಗೆ ಭರಪೂರ ಬಂಡವಾಳ. ಕೊಪ್ಪಳ ಜಿಲ್ಲೆ.ಯಲ್ಲಿನ ಈ ದಂಧೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳದ್ದೇ ಸಾಥ್. ಸೈಬರ್ ಕೆಫೆಗಳು, ಖಾಸಗಿ ವ್ಯಕ್ತಿಗಳು ಪಾಸ್‌ವರ್ಡ್ ಖರೀದಿಸಿ ಜೇಬು ತುಂಬಿಸಿಕೊಳ್ತಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ನಡೆಯಬೇಕರಾದ ಡಾಟಾ ಎಂಟ್ರಿ ಬೇಕಂದರಲ್ಲಿ ನಡೆಯುತ್ತಿದೆ. ಖಾತ್ರಿ ಯೋಜನೆಯಲ್ಲಾದ ಪಾಸ್‌ವರ್ಡ್ ಅಕ್ರಮ ಇಲ್ಲೂ ವ್ಯಾಪಿಸಿದೆ. ಎಲ್ಲಿ ತಮ್ಮ ಡಾಟಾ ಎಂಟ್ರಿ ಸರಿಯಾಗಿ ಆಗುವುದಿಲ್ಲವೋ ಎಂಬ ಭಯದಿಂದ ಶಿಕ್ಷಕರು ಭಾರಿ ಲಂಚ ಕೊಡಬೇಕು. ಈ ಅಕ್ರಮ ಕದ್ದು ಮುಚ್ಚಿ ನಡೀತಿದ್ರೆ ಹೋಗ್ಲಿ ಬಿಡಿ ಅನ್ನಬಹುದಿತು. ಆದ್ರೆ ರಾಜಾರೋಷವಾಗಿಯೇ ನಡೆಯುತ್ತಿದೆ,
ನನ್ನ ಗಮನಕ್ಕೆ ಇದು ಬಂದಿಲ್ಲ. ಎಸ್‌ಎಸ್‌ಎ, ಡಿವೈಪಿಸಿ ಅವರೇ ಅದನ್ನು ನೋಡಿಕೊಳ್ಳುತ್ತಾರೆ. ಅವರನ್ನು ನಾನು ಕೇಳಿ, ಏನು ಅಂತಾ ತಿಳಿದುಕೊಳ್ಳುತ್ತೇನೆ. ಆಮೇಲೆ ನಿಮಗೆ ಮಾಹಿತಿ ನೀಡುತ್ತೇನೆ.
ಶ್ಯಾಮಸುಂದರ,ಡಿಡಿಪಿಐ
ಏನಿದು ವೆಬ್‌ಸೈಟ್
- ಇಲಾಖೆಯ ಕೆಲಸ ಪಾರದರ್ಶಕವಾಗಿರಲಿ ಎಂಬ ಕಾರಣಕ್ಕಾಗಿ ಎಚ್‌ಆರ್‌ಎಂಎಸ್ ಪದ್ಧತಿ ಅಳವಡಿಕೆ
- ಈ ವೆಬ್‌ಸೈಟ್‌ನಲ್ಲಿ ಶಿಕ್ಷಕರು, ಸಿಬ್ಬಂದಿಗೆ ಸಂಬಂಧಿಸಿದ ಡಾಟಾ ಎಂಟ್ರಿ
- ಇದರಿಂದ ಸ್ವಯಂಚಾಲಿತವಾಗಿ ಬಡ್ತಿ ಸೇರಿ ,ಇತರೆ ಸೌಲಭ್ಯ
- ಶಿಕ್ಷಕರ ಸಮಗ್ರ ಮಾಹಿತಿಯೂ ಲಭ್ಯ, ಕಾಲಕಾಲಕ್ಕೆ ವೇತನ ಪಾವತಿ
- ಮಾಹಿತಿ ಭರ್ತಿ ಮಾಡುವ ಅಧಿಕಾರ ಹಿರಿಯ ಸಿಬ್ಬಂದಿಗೆ ಮಾತ್ರ
- ಶಿಕ್ಷಣಾಧಿಕಾರಿ ಕಚೇರಿಯ ಇವರಿಗೆ ಪಾಸ್‌ವರ್ಡ್
- ಡಾಟಾ ಎಂಟ್ರಿ ಇವರದ್ದೇ ಕರ್ತವ್ಯ
- ಆದ್ರೆ ಆಗುತ್ತಿರುವುದು ಮಾತ್ರ ಹೊರಗೆ
- ಪಾಸ್‌ವರ್ಡ್‌ಗೆ ಭಾರಿ ಹಣ ಸಂದಾಯ
- ಖರೀದಿಸಿದವರಿಂದ ಸೈಬರ್ ಕೆಫೆ ಅಥವಾ ಮನೆಗಳಲ್ಲಿ ಡಾಟಾ ಎಂಟ್ರಿ
- ಹೊರಗಿನ ಈ ಮಂದಿಗೆ ಶಿಕ್ಷಕರಿಂದ ಲಂಚ, ಬಡ್ತಿ ಸಿಕ್ಕರೆ ಲಕ್ಷಕ್ಕೂ ಮೀರಿ ಲಂಚ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


