ಗುಂಡು ಹಾರಿಸಿ ಕಳ್ಳರ ಹಿಡಿದ ಭದ್ರತಾ ಸಿಬ್ಬಂದಿ

ಬೆಂಗಳೂರು: ಹೆಬ್ಬಗೋಡಿ ಚೊಕ್ಕಸಂದ್ರದಲ್ಲಿ ನಿರ್ಮಾಣ ಹಂತದ ಬಡಾವಣೆ ಬಳಿ ಕಬ್ಬಿಣದ ರಾಡ್ಗಳನ್ನು ಕದಿಯಲು ವಾಹನದಲ್ಲಿ ಬಂದಿದ್ದ ತಂಡದತ್ತ ಗುಂಡು ಹಾರಿಸಿದ ಸೆಕ್ಯೂರಿಟಿ ಗಾರ್ಡ್ಗಳು, ಇಬ್ಬರು ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅನೇಕಲ್ ನಿವಾಸಿ ಶಿವರೆಡ್ಡಿ(22) ಹಾಗೂ ಮಂಜುನಾಥ್(25) ಬಂಧಿತರು. ಮತ್ತಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ನಸುಕಿನ 4.30ರ ಸುಮಾರಿಗೆ ನಾಲ್ವರು ಕದೀಮರು ಟಾಟಾ ಏಸ್ ವಾಹನದಲ್ಲಿ ಕಬ್ಬಿಣದ ರಾಡ್ಗಳನ್ನು ಕದಿಯಲು ಬಂದಿದ್ದರು.
ಈ ವೇಳೆ ಸೆಕ್ಯೂರಿಟಿ ಗಾರ್ಡ್ ಉತ್ತಪ್ಪ ಮತ್ತು ಸಂತೋಷ್ ಕಳ್ಳರನ್ನು ಗಮನಿಸಿ ತಮ್ಮ ಬಳಿ ಇದ್ದ ಸಿಂಗಲ್ ಬ್ಯಾರಲ್ ಗನ್ನಿಂದ ವಾಹನದ ಚಕ್ರದ ಕಡೆ ಗುಂಡು ಹಾರಿಸಿದ್ದಾರೆ. ವಾಹನ ಪಂಚರ್ ಆದ ಹಿನ್ನೆಲೆಯಲ್ಲಿ ಆರೋಪಿಗಳು ವಾಹನದಿಂದ ಕೆಳಗಿಳಿದು ಓಡಲು ಆರಂಭಿಸಿದ್ದಾರೆ. ಅವರನ್ನು ಬೆನ್ನಟ್ಟಿದ ಉತಪ್ಪ ಮತ್ತು ಸಂತೋಷ್, ಶಿವರೆಡ್ಡಿ ಮತ್ತು ಮಂಜು ಎಂಬುವರನ್ನು ಹಿಡಿದಿದ್ದಾರೆ. ಮತ್ತಿಬ್ಬರು ಆರೋಪಿಗಳು ಕತ್ತಲಲ್ಲಿ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


