ದಸರಾ ಗೊಂದಲಕ್ಕೆ ತೆರೆ

ಮೈಸೂರು: ಮೈಸೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಸರ್ಕಾರ ಸಮರ್ಪಿಸುತ್ತಿದೆ. ಈ ಮೂಲಕ ದಸರೆ ಸಂಬಂಧ ಉಂಟಾಗಿದ್ದ ಗೊಂದಲಗಳಿಗೆ ತೆರೆಬಿದ್ದಿದೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಸಹಕಾರ ಸಚಿವ ಎಚ್.ಎಸ್ ಮಹದೇವಪ್ರಸಾದ್, ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರು ಗುರುವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಸುಮಾರು ಒಂದು ತಾಸು ಮಾತುಕತೆ ನಡೆಸಿ, ಗೊಂದಲಗಳನ್ನು ಬಗೆಹರಿಸಿಕೊಂಡಿದ್ದಾರೆ.
ಮಾತುಕತೆಯ ನಂತರ ಈ ಮೂವರು ಮೇಯರ್ ಎನ್.ಎಂ ರಾಜೇಶ್ವರಿ ಸೋಮು, ಜಿಲ್ಲಾಧಿಕಾರಿ ಸಿ.ಶಿಖಾ ಅವರೊಂದಿಗೆ ಪ್ರಮೋದಾ ದೇವಿ ಒಡೆಯರ್ ಅವರಿಗೆ ಫಲತಾಂಬೂಲ, ಗೌರವಧನ ನೀಡಿ, ದಸರೆಗೆ ಅಧಿಕೃತ ಆಹ್ವಾನವನ್ನು ನೀಡಿದರು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾಗಿ ಇನ್ನೂ ವರ್ಷ ಪೂರೈಸದ ಹಿನ್ನೆಲೆಯಲ್ಲಿ ಅರಮನೆ ಎದುರು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಾರದು ಎಂದು ಪ್ರಮೋದಾದೇವಿ ಪಟ್ಟು ಹಿಡಿದಿದ್ದರಿಂದ ಅರಮನೆ ಮತ್ತು ಸರ್ಕಾರದ ಮಧ್ಯದ ಶೀತಲಸಮರ ಉಂಟಾಗಿತ್ತು.
ಹಿಂದಿನಂತೆಯೇ ನಡೆಯುತ್ತೆ
ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಪ್ರಮೋದಾದೇವಿ ಒಡೆಯರ್ ಅವರ ಭಾವನೆಗಳಿಗೆ ಬೆಲೆ ಕೊಟ್ಟು ಕಾರ್ಯಕ್ರಮ ನಡೆಸುತ್ತೇವೆ. ಅರಮನೆಯ ಸಂಪ್ರದಾಯದಂತೆ ಈ ಹಿಂದೆ ಹೇಗೆ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಈ ಎಲ್ಲ ಕಾರ್ಯಕ್ರಮಗಳನ್ನು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ಗೆ ಸಮರ್ಪಿಸುತ್ತೇವೆ.
ನೃತ್ಯ ಕಾರ್ಯಕ್ರಮಗಳು ಇರುವುದಿಲ್ಲ. ಅ.4ಕ್ಕೆ ಅರಮನೆ ಸಂಪ್ರದಾಯದಂತೆ ವಿಜಯದಶಮಿ ಆಚರಿಸಲಾಗುತ್ತದೆ. ಸರ್ಕಾರ ಅ.4ಕ್ಕೆ ವಿಜಯದಶಮಿಯ ಜಂಬೂಸವಾರಿ ಆಯೋಜಿಸುತ್ತಿದೆ. ಎಂದಿನ ಸಂಪ್ರದಾಯದಂತೆ ದಸರಾ ಮಹೋತ್ಸವ ಜರುಗಲಿದೆ ಎಂದು ಹೇಳಿದರು.
ಹಿಂದೆಯೇ ಹೇಳಿದ್ದೆ
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದಾದೇವಿ ಒಡೆಯರ್, ನಾಡಹಬ್ಬ ದಸರಾ ಮಹೋತ್ಸವಕ್ಕೆ ಅರಮನೆಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಈ ಹಿಂದೆಯೇ ಹೇಳಿದ್ದೆ. ಆದರೆ ನಿಯಮದಂತೆ ಸಿಂಹಾಸನ ಖಾಲಿ ಇರುವಾಗ ಸಂಭ್ರಮದ ಕಾರ್ಯಕ್ರಮ ನಡೆಸುವಂತಿಲ್ಲ.
ಅರಮನೆ ಸಾರ್ವಜನಿಕರದ್ದಾದರೂ ನಮ್ಮ ಮನೆಯೂ ಇಲ್ಲಿಯೆ ಇರುವುದರಿಂದ ಸಂಭ್ರಮ ಬೇಡ ಎಂದು ಮನವಿ ಮಾಡಿದ್ದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


