ಕ್ಯಾಮೆರಾಮನ್ ಆತ್ಮಹತ್ಯೆ

ಧಾರವಾಹಿ ಛಾಯಾಗ್ರಾಹಕ ಕುಮಾರ್(38) ನೇಣು ಬಿಗಿದು ಸ್ನೇಹಿತೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರದ ಸುಬ್ಬಣ್ಣ ಗಾರ್ಡನ್ ನಲ್ಲಿ ನಡೆದಿದೆ..
ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)
ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಧಾರವಾಹಿ ಛಾಯಾಗ್ರಾಹಕ ಕುಮಾರ್(38) ನೇಣು ಬಿಗಿದು ಸ್ನೇಹಿತೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರದ ಸುಬ್ಬಣ್ಣ ಗಾರ್ಡನ್ ನಲ್ಲಿ ನಡೆದಿದೆ.

ಇಲ್ಲಿನ ಪೈಪ್‍ಲೈನ್ ರಸ್ತೆ ನಿವಾಸಿಯಾಗಿದ್ದ ಕುಮಾರ್, ಕೆಲವು ವರ್ಷಗಳ ಹಿಂದೆ ಕನ್ನಡ ಧಾರವಾಹಿಗಳನ್ನು ನಿರ್ದೇಶಿಸಿದ್ದರು. 9 ವರ್ಷಗಳ ಹಿಂದೆ ಇವರಿಗೆ ವಿವಾಹವಾಗಿದ್ದು, ಸಾಂಸಾರಿಕ ಜೀವನದಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಪತ್ನಿ ತೊರೆದು ಸ್ನೇಹಿತೆ ಲಲಿತಾ ಅವರ ಮನೆಯಲ್ಲಿ ಕೆಲವು ದಿನಗಳಿಂದ ವಾಸವಿದ್ದರು. ಲಲಿತಾ ಅವರು ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಧಾರವಾಹಿಗಳೊಂದಿಗೆ ಸಂಪರ್ಕ ಹೊಂದಿದ್ದರಿಂದ ಕುಮಾರ್ ಹಾಗೂ ಲಲಿತಾ ಹಲವು ವರ್ಷಗಳಿಂದ ಪರಿಚಿತರಾಗಿದ್ದರು. ಕೆಲವು ದಿನಗಳ ಹಿಂದಷ್ಟೇ ಪತ್ನಿಯಿಂದ ವಿಚ್ಛೇಧನ ನೋಟಿಸ್ ಬಂದಿತ್ತು ಎನ್ನಲಾಗಿದೆ.

ಇದರಿಂದ ಬೇಸರಗೊಂಡಿದ್ದ ಕುಮಾರ್, ಶುಕ್ರವಾರ ಬೆಳಗ್ಗೆ ತನಗೆ ಜೀವನದಲ್ಲಿ ಬೇಸರವಾಗಿದೆ ಎಂದು ಲಲಿತಾ ಅವರ ಬಳಿ ಹೇಳಿಕೊಂಡಿದ್ದರು. ಬೆಳಗ್ಗಯೇ ಲಲಿತಾ ಅವರಿಗೆ ಕಾಫಿ ಮಾಡಲು ಹೇಳಿದ್ದರು. ಅವರು ಕಾಫಿ ಮಾಡಲು ತೆರಳಿದ್ದಾಗ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com