

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಪ್ರತಿ ಭಾನುವಾರ ವಾಹನ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನು ಹಮ್ಮಿಕೊಳ್ಳಲಾಗುತ್ತಿದೆ.
ಬೆಳಗ್ಗೆ ಉದಯರಾಗದಲ್ಲಿ ಜನ್ನಗಟ್ಟಿ ಕೃಷ್ಣಮೂರ್ತಿಯವರ ಜನಪದ ಗೀತೆಗಳ ಗಾಯನ ನಡೆಯಲಿದೆ. 8ರಿಂದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯ 4ಮತ್ತು 9ನೇ ಪಡೆಯಿಂದ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ಜರುಗಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋದದಲ್ಲಿ ನಾಟ್ಯಭೈರವಿ ನೃತ್ಯಶಾಲೆಯಿಂದ ನೃತ್ಯ ಪ್ರದರ್ಶನ, ಬೆಳಗ್ಗೆ 10ರಿಂದ 11ರವರೆಗೆ ಡೆಲ್ಲಿ ಪಬ್ಲಿಕ್ ಸ್ಕೂಲ್, ದಕ್ಷಿಣ ಶಾಲೆ ಮಕ್ಕಳಿಂದ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 4ಕ್ಕೆ ಪ್ರೊ. ಸಿ. ಯಲ್ಲಪ್ಪ ಅವರಿಂದ ಡಾ. ಶಿವರಾಮ ಕಾರಂತರ ಸಾಹಿತ್ಯ ಮತ್ತು ಕನ್ನಡ ಚಿಂತನ ಉಪನ್ಯಾಸ ಹಾಗೂ ಗಾನ ಸೌರಭ ಯಕ್ಷಗಾನ ಶಾಲೆಯಿಂದ ಬೇಗಾರ್ ಶಿವಕುಮಾರ್ ನಿರ್ದೇಶನದ ಯಕ್ಷಗಾನ ನಡೆಯಲಿದೆ.
ಸಂಧ್ಯಾರಾಗದಲ್ಲಿ ಡಿ. ಶೈಲ ಕಂಪ್ಲಿಯವರಿಂದ ಭಾವಗೀತೆ, ವಚನ, ಭಕ್ತಿಗೀತೆ ಮತ್ತು ದೇಶಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ಮೂಡಿಬರಲಿದೆ.