ಜಿಲ್ಲಾ ಸುದ್ದಿ

ಹ್ಯಾಪಿ ಸ್ಕೂಲ್ಸ್ ಯೋಜನೆಗೆ ಚಾಲನೆ

ಹ್ಯಾಪಿ ಸ್ಕೂಲ್ಸ್ ಯೋಜನೆಗೆ ಚಾಲನೆ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಕ್ರೆಡಾಯ್ ನ `ಹ್ಯಾಪಿ ಸ್ಕೂಲ್ಸ್' ಯೋಜನೆಯ ಭಾಗವಾಗಿ ಶೇಷಾದ್ರಿಪುದ ಸರ್ಕಾರಿ ಶಾಲೆಯ ನವೀಕರಣ ಕಾರ್ಯಕ್ಕೆ ಚಾಲನೆ ದೊರೆಯಿತು.

`ಹ್ಯಾಪಿ ಸ್ಕೂಲ್ಸ್' ಯೋಜೆಗಾಗಿ ಕ್ರೆಡಾಯ್ ಸಂಸ್ಥೆಯು ರೋಟರಿ ಇಂಡಿಯಾ ಲಿಟರೆಸಿ ಮಿಶನ್ ಜೊತೆಗೆ ಕೈ ಜೋಡಿಸಿದ್ದು, 20 ಸರ್ಕಾರಿ ಶಾಲೆಗಳನ್ನು ಗುರುತಿಸಿ ಅವುಗಳ ಮೂಲಸೌಕರ್ಯ ಮತ್ತು ಇತರೆ ಅಗತ್ಯಗಳನ್ನು ಸುಧಾರಣೆಗೊಳಿಸಲಿದೆ. ಈ ಸುಧಾರಣೆಗಳಿಂದ ಕ್ಯಾಂಪಸ್‍ಗಳಲ್ಲಿ ಉತ್ತಮ ಹಾಜರಾತಿ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಗುರಿ ಹೊಂದಲಾಗಿದೆ. ಯೋಜನೆಯ 20 ಶಾಲೆಗಳ ಸರಣಿ ಯಲ್ಲಿ ಈ ಶಾಲೆ ಎಂಟನೆಯ ದಾಗಿದೆ. ಶೇಷಾದ್ರಿಪುರ ಸರ್ಕಾರಿ ಶಾಲೆ ಕ್ಯಾಂಪಸ್‍ನಲ್ಲಿ ನೀರು ಶುದ್ಧೀಕರಣ ಘಟಕ ಆರಂಭವಾಗಲಿದೆ.

ಎಲ್ಲ ಮಕ್ಕಳಿಗೆ ಶೂ, ಪ್ರಯೋಗಾಲಯ ಸಲಕರಣೆ, ಕ್ರೀಡಾ ಸಾಮಾಗ್ರಿ ಹಾಗೂ ಇ-ಲರ್ನಿಂಗ್ ಕಿಟ್ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಮಾತ ನಾಡಿದ ಕ್ರೆಡಾಯ್ ಕಾರ್ಯದರ್ಶಿ ಸುರೇಶ್ ಹರಿ, ಪ್ರತಿ ಹ್ಯಾಪಿ ಸ್ಕೂಲ್ ಅಭಿವೃದಿಟಛಿ ವೆಚ್ಚದ ಶೇ.50ರಷ್ಟನ್ನು ಆರ್‍ಐಎಲ್‍ಎಂ ಜತೆ ಹಂಚಿಕೊಳ್ಳಲಾಗಿದೆ. ಸದ್ಯಕ್ಕೆ ರು.5 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಈ ಯೋಜನೆಯಿಂದ ಸರ್ಕಾರಿ ಶಾಲೆ ತನ್ನದೇ ಅಗತ್ಯಗಳನ್ನು ಹೊಂದಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.