

ಬೆಂಗಳೂರು: ಪರಿವರ್ತನೆ ಜಗದ ನಿಯಮ. ಅದನ್ನು ಅಳವಡಿಸಿಕೊಂಡು ನೀವು ಆದಷ್ಟು ಬೇಗ ಈ ಸೆರೆವಾಸದಿಂದ ಹೊರಬನ್ನಿ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಿ ತೋರಿಸಿ ಎಂದು ಜೈನಮುನಿ ಚಿನ್ಮಯ ಸಾಗರಜೀ (ಜಂಗಲ್ ವಾಲೆ ಬಾಬಾ) ಕೈದಿಗಳಿಗೆ ಸಲಹೆ ನೀಡಿದರು.
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಮಾತನಾಡಿದ ಮುನಿಗಳು, ನೀವು ಎಂದೋ ಮಾಡಿದ ಕರ್ಮ ಫಲವನ್ನು ಇಂದು ಇಲ್ಲಿ ಅನುಭವಿಸುತ್ತಿದ್ದೀರಿ. ಇಷ್ಟು ದಿನ ಅನುಭವಿಸಿದ ಸೆರೆವಾಸ ಸಾಕು. ಇನ್ನುಮುಂದೆ ಜೈಲಿನಲ್ಲಿ ಸನ್ನಡೆಯಿಂದ ನಡೆದುಕೊಂಡು ಜೈಲಿನಿಂದ ಹೊರಬನ್ನಿ ಎಂದರು.ಇದೇ ವೇಳೆ ಬಾಬಾ ಅವರು ಎಲ್ಲಾ ಕೈದಿಗಳಿಗೆ, ಜೈಲಿನ ಅಧಿಕಾರಿಗಳಿಗೆ ಜಪಮಾಲೆ ವಿತರಿಸಿದರು. ಕಾರ್ಯಕ್ರಮದಲ್ಲಿ ಜೈಲಿನ ಅಧೀಕ್ಷಕ ಕೃಷ್ಣ ಕುಮಾರ್, ಸುರೇಂದ್ರ ಕುಮಾರ್, ಗುಣಪಾಲ್ ಜೈನ್ ಇದ್ದರು.