

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಈ ಸಂಬಂಧ ಹೊಸ ಸೂತ್ರ ರೂಪಿಸಿದೆ.
ಕಸ ವಿಂಗಡಣೆ ಹಾಗೂ ತ್ಯಾಜ್ಯ ನಿರ್ವಹಣೆ ಸಮಸ್ಯೆ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ಇಂದು ಮಧ್ಯಂತರ ಆದೇಶ ಹೊರಡಿಸಿದ್ದು, 2 ಇನ್ 1 ಬ್ಯಾಗ್ ಪದ್ದತಿ ಪಾಲಿಸುವಂತೆ ಸೂಚಿಸಿದೆ.
ಪ್ಲಾಸ್ಟಿಕ್ ಕವರ್‌ನಲ್ಲಿ ಕಸ ಸಂಗ್ರಹಿಸಬಾರದು ಎಂದು ಹೇಳಿರುವ ಕೋರ್ಟ್, ಪ್ರತ್ಯೇಕ ಡಬ್ಬಗಳಲ್ಲಿ ಕಸ ಸಂಗ್ರಹಿಸುವಂತೆ ಸೂಚಿಸಿದೆ. ಹಸಿರು ಬಣ್ಣದ ಬುಟ್ಟಿಯಲ್ಲಿ ಅಡುಗೆ ಮನೆ ತ್ಯಾಜ್ಯ ಹಾಗೂ ಕೆಂಪು ಬುಟ್ಟಿಯಲ್ಲಿ ವೈದ್ಯಕೀಯ ತ್ಯಾಜ್ಯ ಸಂಗ್ರಹಿಸುವಂತೆ ಸೂಚಿಸಿದೆ. ಅಲ್ಲದೆ ತಪ್ಪಿದಲ್ಲಿ ಕೆಎಂಸಿ ಕಾಯ್ದೆ ಅನ್ವಯ ಶಿಕ್ಷಿಸಲು ಕೋರ್ಟ್ ಆದೇಶ ನೀಡಿದೆ.
ನಗರದ ಹೋಟೆಲ್, ಶಾಲೆ ಹಾಗೂ ಸರ್ಕಾರಿ ಕಚೇರಿಗಳೂ ಈ ಸೂತ್ರ ಅನ್ವಯವಾಗಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.