

ಬೆಂಗಳೂರು: ಎಂ.ಎಸ್.ಪಾಳ್ಯ ಬಳಿ ಸಾಯಿನಗರದಲ್ಲಿ ಸಂಭ್ರಮ್ ಇಂಜಿನಿಯರಿಂಗ್ ಕಾಲೇಜಿನ ಹಿಂಬದಿಯ ಪಾಳು ಮನೆಯೊಂದರಲ್ಲಿ ಮಹಿಳೆ ಹಾಗೂ ಪುರುಷನೊಬ್ಬನನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
38 ವರ್ಷದ ಪಾಪಚ್ಚಿ ಎಂಬ ಮಹಿಳೆ ಮತ್ತು 40 ವರ್ಷದ ಗಣೇಶ್ ಹತ್ಯೆಯಾದವರು. ಗಣೇಶ್ ಮತ್ತು ಪಾಪಚ್ಚಿ ಅನೈತಿಕ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.
ಕೋಪೊದ್ರಿಕ್ತನಾದ ಪಾಪಚ್ಚಿಯ ಪತಿ ರಾಜು ಕೊಲೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿದ್ಯಾರಣ್ಯ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.