ಬೆಂಗಳೂರು-ಹಾಸನ ನಡುವೆ ಪ್ರಾಯೋಗಿಕ ರೈಲು

ಮಹತ್ವಕಾಂಕ್ಷಿ ಯೋಜನೆಯಾಗಿರುವ ಬೆಂಗಳೂರು- ಹಾಸನ ರೈಲ್ವೆ ಯೋಜನೆಗೆ ತಿಪ್ಪಸಂದ್ರ ಕುಣಿಗಲ್ ಮಾರ್ಗದ 10 ಕಿ.ಮೀ. ಪ್ರಾಯೋಗಿಕ ಓಡಾಟಕ್ಕೆ ಶನಿವಾರ ಚಾಲನೆ ನೀಡಲಾಯಿತು...
ಹಾಸನ-ಬೆಂಗಳೂರು ರೈಲ್ವೇ ಯೋಜನೆ (ಸಂಗ್ರಹ ಚಿತ್ರ)
ಹಾಸನ-ಬೆಂಗಳೂರು ರೈಲ್ವೇ ಯೋಜನೆ (ಸಂಗ್ರಹ ಚಿತ್ರ)
Updated on: 

ಮಾಗಡಿ: ಮಹತ್ವಕಾಂಕ್ಷಿ ಯೋಜನೆಯಾಗಿರುವ ಬೆಂಗಳೂರು- ಹಾಸನ ರೈಲ್ವೆ ಯೋಜನೆಗೆ ತಿಪ್ಪಸಂದ್ರ ಕುಣಿಗಲ್ ಮಾರ್ಗದ 10 ಕಿ.ಮೀ. ಪ್ರಾಯೋಗಿಕ ಓಡಾಟಕ್ಕೆ ಶನಿವಾರ ಚಾಲನೆ ನೀಡಲಾಯಿತು.

1996-97 ರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಧಾನಿಗಳಾಗಿ ದ್ದಾಗ ಯೋಜನೆಗೆ ಚಾಲನೆ ಕೊಟ್ಟಿ ದ್ದರು. ಬೆಂಗಳೂರಿನ ಬಾಣವಾರದಿಂದ ಹಾಸನ ಮಾರ್ಗ ರೈಲ್ವೆ ಯೋಜನೆ ಈಗಾಗಲೇ ಶೇ.80 ರಷ್ಟು  ಪೂರ್ಣಗೊಂಡಿ ದೆ. ಆಗಸ್ಟ್‍ನಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲಿದೆ ಎಂದು ರೈಲ್ವೆ ಉಸ್ತುವಾರಿ ಅಧಿಕಾರಿ ಎಂ. ರವೀಂದ್ರ ರೆಡ್ಡಿ ತಿಳಿಸಿದ್ದಾರೆ. ಹಾಸನ ಬೆಂಗಳೂರು ರೈಲ್ವೆ ಮಾರ್ಗದಲ್ಲಿ ಮೇಲು ಸೇತುವೆ.  ಅಂಡರ್ ಪಾಸ್ ಮಾಡಿರುವುದರಿಂದ ಸುರಕ್ಷಿತ ಮಾರ್ಗವಾಗಿದೆ. 50 ಕಿ.ಮೀ. ಅಂತರ ಕಡಿಮೆಯಾಗುವುದರಿಂದ ಒಂದುವರೆ ಗಂಟೆ ಪ್ರಯಾಣ ಕಡಿತವಾಗುತ್ತಿದೆ.

ಅದ್ದೂರಿ ಚಾಲನೆ
ತಿಪ್ಪಸಂದ್ರದಲ್ಲಿ ಪ್ರಾಯೋಗಿಕ ರೈಲ್ವೆ ಓಡಾಟಕ್ಕೆ ತಿಪ್ಪಸಂದ್ರ ಗ್ರಾಮಸ್ಥರು ಅದ್ದೂರಿಯಾಗಿ ಚಾಲನೆಕೊಟ್ಟರು. ಅಲ್ಲರ ಮೊಗದಲ್ಲೂ ನಮ್ಮ ಊರಿಗೂ ರೈಲು ಬಂತೆಬಂಬ ಸಂತೋಷವಿತ್ತು. ರೈಲ್ವೆ ಅಧಿಕಾರಿಗಳಿಗೆ ಶುಭ  ಕೋರಿ ಚಪ್ಪಾಳೆ ತಟ್ಟುವ ಮೂಲಕ ಪ್ರಾಯೋಗಿಕ ಸೇವೆಗೆ ಗ್ರಾಮಸ್ಥರು ಚಾಲನೆ ಕೊಟ್ಟಿದ್ದು ರೈಲ್ವೆ ಅಧಿಕಾರಿಗಳಿಗೆ ಕಾಮಗಾರಿ ಪೂರ್ಣ ಮಾಡಿದ ಹರ್ಷ ಎದ್ದು ಕಾಣುತ್ತಿತ್ತು.

ಪ್ರಾಯೋಗಿಕ ಚಾಲನೆ ವೇಳೆ ತಿಪ್ಪಸಂದ್ರ ಗ್ರಾ.ಪಂ. ಅಧ್ಯಕ್ಷೆ ತಾರಾಮಣಿ, ರಾಮಣ್ಣ, ಗ್ರಾ.ಪಂ. ಸದಸ್ಯರಾದ ಪ್ರಕಾಶ್, ಟಿ.ಆರ್.ರಾಜಣ್ಣ, ಪಾಳ್ಯದಳ್ಳಿ, ಕಾಂತರಾಜು, ತಿಪ್ಪಸಂದ್ರ ಹರೀಶ್, ನೇರಳೆಕೆರೆ ಸೀನಪ್ಪ,  ಶ್ರೀನಿವಾಸ್, ಅಂಗಿ ಚಂದ್ರು, ರೈಲ್ವೆ ಇಲಾಖೆ ಹಿರಿಯ ಎಂಜಿನಿಯರ್ ಸತ್ಯನಾರಾಯಣ್, ಎಂಜಿನಿಯರ್ ಬಿ.ಟಿ.ಬಿನ್ನಿ ಭಾಗವಹಿಸಿದ್ದರು.

ತಿಪ್ಪಸಂದ್ರ-ಬೆಂಗಳೂರು ರು. 12 ತಿಪ್ಪಸಂದ್ರದಿಂದ ಬೆಂಗಳೂರಿಗೆ ಕೇವಲರು. 12 ನಲ್ಲಿ ಪ್ರಯಾಣ ಮಾಡಬಹುದು. ರಸ್ತೆ ಮಾರ್ಗದಲ್ಲಿ ಹೋದರೆ 35 ರಿಂದ 40 ರೂ. ವೆಚ್ಚವಾಗುತ್ತಿದೆ. ಪ್ರಯಾಣಿಕರಿಗೆ  ಅನುಕೂಲವಾಗಲು ಸುಲಭ ಶೌಚಾಲಯ ಅತ್ಯಾಧುನಿಕ ರೀತಿಯಲ್ಲಿ ಮಾಡಿದ್ದು ಉತ್ತಮವಾಗಿ ರೈಲ್ವೆ ಮಾರ್ಗ ಬಂದಿದೆ. ರೈಲ್ವೆ ಕ್ವಾಟರ್ಸ್ ಕುಣಿಗಲ್‍ನಲ್ಲಿ ಮಾಡುವ ಬದಲು ತಿಪ್ಪಸಂದ್ರದಲ್ಲೆ ಮಾಡುವ ಮೂಲಕ  ಹೋಬಳಿ ಅಭಿವೃದ್ಧಿಗೆ ರೈಲ್ವೆ ಇಲಾಖೆ ಸಾಕಷ್ಟು ಮುತುವರ್ಜಿ ವಹಿಸಿದೆ. ಕುಣಿಗಲ್‍ನಲ್ಲಿ ಕೆಲವು ತಾಂತ್ರಿಕ ತೊಂದರೆಗಳಿತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾಂತ್ರಿಕ ತೊಂದರೆಗಳನ್ನು ನಿವಾರಣೆ ಮಾಡಿದ್ದು,  ಸೋಲೂರು ಮಾರ್ಗ ಪೂರ್ಣಗೊಂಡ ನಂತರ ಆಗಸ್ಟ್‍ನಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲಿದೆ ಎಂದು ರೆಡ್ಡಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com