ಮಧ್ಯರಾತ್ರಿವರೆಗೆ ಆನೆಯ ಶವ ಕತ್ತರಿಸಿದ್ದ!

ತಾಲೂಕಿನ ಜಾಗೇರಿ ಸಮೀಪದ ಸಿಲುವೈಪುರದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸಾವಿಗೀಡಾದದ್ದು ಸುಮಾರು 25 ವರ್ಷದ ಹೆಣ್ಣಾನೆ. ಈ ಆನೆಯನ್ನು ಆರೋಪಿ ....
ಮೃತ ಆನೆಯನ್ನು ಪರಿಶೀಲಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು
ಮೃತ ಆನೆಯನ್ನು ಪರಿಶೀಲಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು
Updated on: 

ಕೊಳ್ಳೇಗಾಲ: ತಾಲೂಕಿನ ಜಾಗೇರಿ ಸಮೀಪದ ಸಿಲುವೈಪುರದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸಾವಿಗೀಡಾದದ್ದು ಸುಮಾರು 25 ವರ್ಷದ ಹೆಣ್ಣಾನೆ. ಈ ಆನೆಯನ್ನು ಆರೋಪಿ ಜಪಮಾಲೈ ರಾತ್ರಿಪೂರ್ತಿ ಪಾನಮತ್ತನಾಗಿ ಅದೇ ಗ್ರಾಮದ ಮತ್ತೊಬ್ಬನ ಸಹಕಾರದಿಂದ ಕೊಡಲಿ ಹಾಗೂ ಮಚ್ಚಿನಿಂದ ಕತ್ತರಿಸಿ 8 ತುಂಡು ಮಾಡಿ ಮಣ್ಣು ಮುಚ್ಚಿದ್ದ ಎಂಬ ಸತ್ಯ ಈಗ ಹೊರಬಿದ್ದಿದೆ.

ಶನಿವಾರ ಮೃತಪಟ್ಟಿದ್ದ ಈ ಆನೆಯ ಕಳೇಬರಹವನ್ನು ಬುಧವಾರ ಸುದೀರ್ಘ ಕಾರ್ಯಾಚರಣೆ ಮೂಲಕ ಅಧಿಕಾರಿಗಳ ಸಮಕ್ಷಮ ಹೊರ ತೆಗೆಯಲಾಯಿತು. ಬೆಳಗ್ಗೆ 9ಗಂಟೆಗೆ ಚುರುಕಿನಿಂದ ಕಾರ್ಯಾ ಚರಣೆ ನಡೆಸಲಾಯಿತಾದರೂ ಆನೆಯ ಕಳೇಬರವನ್ನು ಸಂಪೂರ್ಣವಾಗಿ ಮೇಲೆ ತ್ತುವ ಕಾರ್ಯಾಚರಣೆ ಸಂಜೆವರೆಗೂ ನಡೆಯಿತು. ಇದಕ್ಕಾಗಿ 2 ಜೆಸಿಬಿ ಯಂತ್ರಗಳನ್ನು ಬಳಸಲಾಯಿತು. ಬಾರಿ ಗಾತ್ರದ ಕಲ್ಲುಗಳು ಜೆಸಿಬಿಯಂ
ತ್ರಕ್ಕೆ ಆಗಿಂದಾಗ್ಗೆ ಸಿಗುತ್ತಿದ್ದ ಹಿನ್ನೆಲೆ ಮಧ್ಯಾಹ್ನದ ತನಕ ಕಾರ್ಯಾಚರಣೆ ವಿಳಂಬವಾಯಿತು. ಕಳೆ ಬರ ದೊರೆಯುದ್ದಂತೆ ಮರಣೋತ್ತರ ಪರೀಕ್ಷೆ ಗೊಳಪಡಿಸಲಾಯಿತು. ಮಹದೇಶ್ವರ ವನ್ಯಧಾಮದ ಡಿಸಿಎಫ್  ಡಾ.ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅನುಪಮ, ಶಿವರಾಮಯ್ಯ, ವಲಯ ಅರಣ್ಯಾಧಿಕಾರಿ ಅಂಕರಾಜು, ಮುತ್ತುರಾಜೇಗೌಡ, ಸಹಾಯಕ ಅಧಿಕಾರಿ ಬೋಜಯ್ಯ, ಪ್ರಕಾಶ್, ಅರಣ್ಯ ಸಂಚಾರಿದಳದ ಪಿಎಸೈ ಅಶೋಕ್ ಗೌಡ, ಹಿರಿಯ ವೈದ್ಯ ಡಾ. ಉಮಾಶಂಕರ್, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಣ್ಣ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಆನೆಯ ಮರಣೋತ್ತರ ಪರೀಕ್ಷೆಯನ್ನು ನಿಯಮಾನುಸಾರ ನಡೆಸಲಾಯಿತು.

ಆನೆಸೊಂಡಿಲಿಗೆ ಸಣ್ಣಸಣ್ಣ ಅಕ್ರಮ ವಿದ್ಯುತ್ ತಂತಿಗಳ ತಗುಲಿದ ಹಿನ್ನೆಲೆ ಮತಪಟ್ಟಿದೆ. ಸುಮಾರು ಐದಾರು ಕಡೆ ಆನೆಯ ಸೊಂಡಿಲಿಗೆ ಸುಟ್ಟು ಗಾಯಗಳಾಗಿರುವುದು ಕಂಡುಬಂದಿದೆ ಎಂದು ಸ್ಥಳಕ್ಕೆ ಆಗಮಿಸಿದ ಸೆಸ್ಕಾಂ ಅಧಿಕಾರಿ ಲಿಂಗರಾಜು ಘಟನೆ ಬಗ್ಗೆ ಮಾಹಿತಿ ಪಡೆದರು. ಆರೋಪಿಯನ್ನು ಮಂಗಳವಾರ ಸ್ಥಳಕ್ಕೆ ಕರೆತಂದು ಮಹಜರು ನಡೆಸಲಾಗಿದೆ, ಸಂಜೆ ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಹೇಳಿದಂತೆ ಆನೆಯನ್ನು ತುಂಡು ತುಂಡಾಗಿ ಕತ್ತರಿಸಿರುವುದು ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ. ಪ್ರಾಣಿಗಳ ಕಾಟದಿಂದ ಬೆಳೆ ರಕ್ಷಿಸಿಕೊಳ್ಳಲು ಆರೋಪಿ ಇಂತಹ ದುಷ್ಕತ್ಯ ಎಸಗಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ.
ಡಾ.ಮಾಲತಿ ಪ್ರಿಯಾ ಡಿಸಿಎಫ್  ಮಹದೇಶ್ವರ ವನ್ಯಧಾಮ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com