

ಬೆಂಗಳೂರು: ಮಕ್ಕಳಿಲ್ಲದ ದಂಪತಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಸೃಷ್ಟಿ ಗ್ಲೋಬಲ್ ಮೆಡಿಕೇರ್ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಎನ್.ಚಂದನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ನಿರಾಕರಿಸಿದೆ. ಮಕ್ಕಳಿಲ್ಲದವರಿಗೆ ಚಿಕಿತ್ಸೆ ಮೂಲಕ ಮಕ್ಕಳ ಭಾಗ್ಯ ಕರುಣಿಸುತ್ತೇವೆ ಎಂದು ಸೃಷ್ಟಿ ಗ್ಲೋಬಲ್ ಮೆಡಿಕೇರ್ ಸಂಸ್ಥೆ ವಂಚಿಸಿದೆ ಎಂದು ಹಲವರು ದೂರು ಸಲ್ಲಿಸಿದ್ದರು.
ಹೀಗಾಗಿ ಸಂಸ್ಥೆಯ ಸಂಸ್ಥಾಪಕ ಕೆ.ಟಿ.ಗುರುಮೂರ್ತಿ ಸೇರಿದಂತೆ ಹಲವರ ವಿರುದ್ದ ಸಿಟಿ ಕ್ರೈಂಬ್ರ್ಯಾಂಚ್ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಕೆ.ಟಿ.ಗುರುಮೂರ್ತಿ ನ್ಯಾಯಾಂಗ ಬಂಧನಲ್ಲಿದ್ದಾರೆ.