ಜಾರಿಯಾಗದ ಪ್ರಾಧಿಕಾರ: ಹೈಕೋರ್ಟ್ ಕಿಡಿ

ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಹಂತದಲ್ಲಿ ಬಾಕಿ ಇರುವ ಒಂಬತ್ತು ಜಿಲ್ಲೆಗಳಲ್ಲಿ ಪ್ರಾಧಿಕಾರ ಸ್ಥಾಪನೆಗೆ ಅವಶ್ಯವಿರುವ ನಾಗರೀಕ ಸಮಾಜದ ಸದಸ್ಯರನ್ನು ಶೀಘ್ರ ...
ಹೈಕೋರ್ಟ್
ಹೈಕೋರ್ಟ್
Updated on: 

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಹಂತದಲ್ಲಿ ಬಾಕಿ ಇರುವ ಒಂಬತ್ತು ಜಿಲ್ಲೆಗಳಲ್ಲಿ ಪ್ರಾಧಿಕಾರ ಸ್ಥಾಪನೆಗೆ ಅವಶ್ಯವಿರುವ
ನಾಗರೀಕ ಸಮಾಜದ ಸದಸ್ಯರನ್ನು ಶೀಘ್ರ ನೇಮಕ ಮಾಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.

ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸುದರ್ಶನ್ ಬಲ್ಲಾಳ್ ನೇಮಕ ಪ್ರಶ್ನಿಸಿ ಈ ಹಿಂದೆ ಜಿ.ಕೆ. ಆದರ್ಶ ಎಂಬುವರು ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ, ಆರು ತಿಂಗಳ ಹಿಂದೆಯೇ ಸರ್ಕಾರ ದೂರು ಪ್ರಾಧಿಕಾರ ಸ್ಥಾಪನೆ ಮಾಡುವುದಾಗಿ ಹೇಳಿಕೆ ನೀಡಿತ್ತು. ಆದರೆ ಈವರೆಗೂ ಅದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಬೆಂಗಳೂರಿನಲ್ಲಿ ಅನವಶ್ಯಜಾಹಿರಾತು ಫಲಕಗಳಿಗೇನು ಕಮ್ಮಿ ಇಲ್ಲ.

ಆದರೆ, ಸಾರ್ವಜನಿಕರಿಗೆ ಉಪಯೋಗ ಆಗುವಂತಹ ಇಂತಹ ವಿಷಯಗಳ ಬಗ್ಗೆಯೂ ಜಾಹೀರಾತು ನೀಡುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ಸರ್ಕಾರ ತಾವಾಗಿಯೇ ಏನನ್ನು ಮಾಡುವುದಿಲ್ಲ. ಎಲ್ಲವನ್ನೂ ಹೈಕೋರ್ಟ್‍ನಿಂದ ಹೇಳಿಸಿಕೊಂಡು ಮಾಡಬೇಕೆ ಎಂದು ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತು. ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ. ಶಿವಣ್ಣ ವಾದ ಮಂಡಿಸಿ, ದೂರು ಪ್ರಾಧಿಕಾರ ಸದಸ್ಯರ ಆಯ್ಕೆ ಸಮಿತಿಗೆ ಲೋಕಾಯುಕ್ತದಿಂದ ಸದಸ್ಯರನ್ನು ನೇಮಕ ಮಾಡಿರಲಿಲ್ಲ. ಇದೀಗ ಹಿರಿಯ ಅ„ಕಾರಿ ಪ್ರಣವ್ ಮೊಹಾಂತಿ ಅವರ ಹೆಸರನ್ನು ಕಳುಹಿಸಲಾಗಿದೆ.

ಹೀಗಾಗಿ ನೇಮಕ ಪ್ರಕ್ರಿಯೇ ಆರಂಭಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾನುಸಾರ ದಾಖಲಾಗಿರುವ ದೂರುಗಳ ವಿವರಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ಏಕಸದಸ್ಯ ಪೀಠ, ಪ್ರಾಧಿಕಾರದ ಸ್ಥಾಪನೆ ಮಾಡಿರುವ ಸಂಬಂಧ ಮಾಧ್ಯಮಗಳಲ್ಲಿ ಜಾಹಿರಾತು ನೀಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಮತ್ತು ಪ್ರಾಧಿಕಾರದಲ್ಲಿ ಖಾಲಿ ಇರುವ ನಾಗರಿಕ ಸಮಾಜದ ಸದಸ್ಯರ ಹುದ್ದೆ ನೇಮಕ ಜೂ.24ರ ಒಳಗಾಗಿ ಪೂರ್ಣಗೊಳಿಸಿ ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com