ಇನ್ನೂ 2 ದಿನ ಮಳೆ ನಿಲ್ಲಲ್ಲ

ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಯಲಿದ್ದು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರಿಸುವ ಸಾಧ್ಯತೆ ಇದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಯಲಿದ್ದು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರಿಸುವ ಸಾಧ್ಯತೆ ಇದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಹಗಲಿನಲ್ಲಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಲಕ್ಷಣಗಳಿವೆ. ಮೇ 18 ರಂದು ದಕ್ಷಿಣ ಒಳನಾಡು ಮತ್ತು ಕರಾವಳಿಯ ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಮರುದಿನ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದು, ಮೇ 20 ರಂದು ದಕ್ಷಿಣ ಒಳನಾಡಿನ 16 ಜಿಲ್ಲೆಗಳ ಪೈಕಿ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ.

ಶನಿವಾರ ಕೋಲಾರ, ಶಿವಮೊಗ್ಗ, ಬೆಂಗಳೂರು, ಉಡುಪಿ ಜಿಲ್ಲೆಗಳಲ್ಲಿ ತಲಾ 7 ಸೆಂಮೀ ವರೆಗೂ ಸುರಿದ ಪೂರ್ವ ಮುಂಗಾರು ಮಳೆ, ಭಾನುವಾರ ಕೂಡ ಅಲ್ಲಲ್ಲಿ ಆರ್ಭಟಿಸಿತು.

ಕೆಜಿಎಫ್ ನಲ್ಲಿ 28 ಮಿಮೀ, ಬಾಗಲಕೋಟೆ, ಧಾರವಾಡದಲ್ಲಿ ತಲಾ 5 ಮಿಮೀ, ಚಿಕ್ಕಮಗಳೂರು - 1928, ಚಾಮರಾಜನಗರ - 1228 ಮಿಮೀ, ಪಾವಗಡ - 18 ಮಿಮೀ, ಹುಣಸೂರು - 21 ಮಿಮೀ, ಹೆಸರಘಟ್ಟ - 40 ಮಿಮೀ, ಗುಡ್ಲುಪೇಟೆ -51 ಮಿಮೀ ಮಳೆಯಾಗಿದೆ.

ಯಾವುದು ಈ ಮಳೆ?
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಪೂರ್ವ ಮುಂಗಾರು ಚುರುಕಾಗಿದೆ. ಬಂಗಾಳಕೊಲ್ಲಿಯ ಪಶ್ಚಿಮ ಮಧ್ಯಭಾಗ ಮತ್ತು ಆಂಧ್ರ ಪ್ರದೇಶದ ಕರಾವಳಿ ಹೊರಗಿನ ಭಾಗದಲ್ಲಿ ಎರಡು ದಿನಗಳಿಂದಲೂ ಪ್ರಬಲ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಇದು ಸಮುದ್ರ ಮಟ್ಟದಿಂದ 1.5ರಿಂದ 5.8 ಕಿಮೀ ಎತ್ತರ ದಲ್ಲಿದ್ದು, ಉತ್ತರದಿಂದ ಪ್ರಬಲ ತೇವಾಂಶದ ಗಾಳಿ ಏಳುತ್ತಿದೆ. ದಿನ ಕಳೆದಂತೆ ಸುಳಿಗಾಳಿಯ ಪ್ರಭಾವ ಕಡಿಮೆಯಾಗಲಿದ್ದು, ಮಳೆಯೂ ಕಡಿಮೆಯಾಗಲಿದೆ. ಆದರೆ, ಇದರ ಪ್ರಭಾವ ಮುಂದಿನ ಮೂರು ದಿನಗಳವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com