

ಮೈಸೂರು:ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ಶಿಫಾರಸು ಮಾಡಲಾಗಿದ್ದ ಹೆಸರುಗಳನ್ನು ಯಾವ ಕಾರಣಕ್ಕೆ ರಾಜ್ಯಪಾಲರು ತಿರಸ್ಕರಿಸಿದ್ದಾರೋ ಗೊತ್ತಿಲ್ಲ. ಶೀಘ್ರವೇ ಹೊಸ ಹೆಸರು ಕಳುಹಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ವಿ.ಆರ್. ಸುದರ್ಶನ್ ಸೇರಿದಂತೆ ಸದಸ್ಯ ಸ್ಥಾನಕ್ಕೆ 8 ಮಂದಿ ಹೆಸರನ್ನು ಸೂಚಿಸಿದ್ದೆವು. ಆದರೆ ರಾಜ್ಯಪಾಲರು ಹಿಂದೆ ನಾಲ್ಕು ಹೆಸರುಗಳಿಗೆ ಒಪ್ಪಿಗೆ ನೀಡಿದ್ದಾರೆ. ಈಗ ನಾಲ್ವರ ಹೆಸರನ್ನು ತಿರಸ್ಕರಿಸುವ ವಿಷಯ ಮಾಧ್ಯಮಗಳ ಮೂಲಕ ತಿಳಿದಿದೆ. ಯಾವ ಕಾರಣಕ್ಕೆ ತಿರಸ್ಕರಿಸಿದ್ದಾರೆ ಎಂಬುದು ಇನ್ನೂ ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.
ಕೆಪಿಎಸ್ ಸಿ ನೇಮಕದ ಪಟ್ಟಿಯನ್ನು ರಾಜ್ಯಪಾಲರು ವಾಪಸು ಕಳಿಸಿದ್ದಾರೆ. ಹೀಗಾಗಿ ರಾಜ್ಯಪಾಲರಿಗೆ ಸರಿಯಾದ ಸಂದರ್ಭದಲ್ಲಿ ತಕ್ಕ ಉತ್ತರವನ್ನು ರಾಜ್ಯ ಸರ್ಕಾರ ನೀಡುತ್ತದೆ.
ಡಾ.ಜಿ.ಪರಮೇಶ್ವರ್