

ಬೆಂಗಳೂರು: ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‍ಇ ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಚೆನ್ನೈ ಪ್ರಾಂತದಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ ಲಭಿಸಿದೆ.
ರಾಜ್ಯದಿಂದ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ ಶೇ.99.67ರಷ್ಟು ಉತ್ತೀರ್ಣರಾಗಿದ್ದಾರೆ. ಆಂಧ್ರಪ್ರದೇಶವು ಶೇ.99.86 ಫಲಿತಾಂಶದೊಂದಿಗೆ ಮೊದಲ ಸ್ಥಾನ ಅಲಂಕರಿಸಿದರೆ, ಗೋವಾ ಶೇ.99.77, ತಮಿಳುನಾಡು, 99.76, ತೆಲಂಗಾಣ, ಶೇ.99.72, ಮಹಾರಾಷ್ಟ್ರ ಶೇ.99 ಫಲಿತಾಂಶ ಪಡೆದುಕೊಂಡಿವೆ.
ಕರ್ನಾಟಕದಿಂದ ಒಟ್ಟಾರೆ 32,487 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 32,380 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 1300 ವಿದ್ಯಾರ್ಥಿಗಳು ಅತ್ಯುಚ್ಛ ಶ್ರೇಣಿ ಪಡೆದುಕೊಂಡಿದ್ದಾರೆ.