ಭೀಕರ ರಸ್ತೆ ಅಪಘಾತ: ಐವರ ಸಾವು

ಇಲ್ಲಿನ ರಾಯನಾಳ ಬಳಿ ಸೋಮವಾರ ಟೆಂಪೋ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಐವರು ಮೃತಪಟ್ಟಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಹುಬ್ಬಳ್ಳಿ: ಇಲ್ಲಿನ ರಾಯನಾಳ ಬಳಿ ಸೋಮವಾರ ಟೆಂಪೋ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಐವರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭರಮಗೌಡ (65), ಸಾವಿತ್ರಿ (35), ದರ್ಶನ (10) ಟೆಂಪೋ ಚಾಲಕ ಪುಟ್ಟಪ್ಪನ ಕುರಬರ (45), ಚೇತನ್ (3) ಮೃತರು. ತೀವ್ರವಾಗಿ ಗಾಯಗೊಂಡಿದ್ದ ಚೇತನ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 
ಆದರೆ, ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಗಾಯಗೊಂಡಿದ್ದ ಮೂವತ್ತಕ್ಕೂ ಹೆಚ್ಚು ಮಂದಿಯನ್ನು ಕಿಮ್ಸ್ ಗೆ ದಾಖಲಿಸಲಾಗಿದೆ. ಮೃತರು ಕುಂದಗೋಳ ತಾಲೂಕಿನ ಮಂಡಿಗನಾಳ ಗ್ರಾಮದವರು. 
ಇವರು ಬೆಳಗಾವಿ ಜಿಲ್ಲೆ ಹುಕ್ಕೇರಿಗೆ ಮದುವೆ ಮಾತುಕತೆಗಾಗಿ ಹೋಗಿದ್ದರು. ಅಲ್ಲಿಂದ ಗ್ರಾಮಕ್ಕೆ ಮರಳುತ್ತಿರುವಾಗ ಘಟನೆ ನಡೆದಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com