ಆಧಾರ್ ಕಡ್ಡಾಯವಲ್ಲದಿದ್ದರೂ ಶೇ.100 ಗುರಿಯ ಹಠ!

ಶಾಲಾ ಮಕ್ಕಳ ಆಧಾರ್ ಕಡ್ದಾಯವೇನಲ್ಲ. ಆದರೆ ಶೇ.100 ರಷ್ಟು ಶಾಲಾ ಮಕ್ಕಳ ಆಧಾರ್ ಮಾಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ದಾಪುಗಾಲಿಟ್ಟಿದೆ.
ಆಧಾರ್ ಕಾರ್ಡ್
ಆಧಾರ್ ಕಾರ್ಡ್
Updated on: 

ಬೆಂಗಳೂರು:ಶಾಲಾ ಮಕ್ಕಳ ಆಧಾರ್ ಕಡ್ದಾಯವೇನಲ್ಲ. ಆದರೆ ಶೇ.100 ರಷ್ಟು ಶಾಲಾ ಮಕ್ಕಳ ಆಧಾರ್ ಮಾಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ದಾಪುಗಾಲಿಟ್ಟಿದೆ.
ಶಾಲಾ ಹಂತದಲ್ಲೇ ನೋಂದಣಿ ಕಾರ್ಯಕ್ರಮ, ಆಧಾರ್ ಮಾಡಿಸಿಲ್ಲದ ಮಕ್ಕಳ ಪಟ್ಟಿ ತಯಾರಿಕೆ, ಯುಐಡಿಎಐ ಸಂಸ್ಥೆಯ ಸಹಯೋಗದಲ್ಲಿ ನೋಂದಣಿಯಾದ ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಕೊಡಿಸುವ ವಿಚಾರದಲ್ಲಿ ಕಾರ್ಯನಿರ್ವಹಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಅಚ್ಚರಿ ಮೂಡಿಸಿದೆ.
ಇತ್ತೀಚೆಗಷ್ಟೇ ಶಿಕ್ಷಣ ಸಚಿವರು ಹೇಳಿಕೆ ನೀಡಿ ಶಾಲಾ ಮಕ್ಕಳಿಗೆ ಆಧಾರ್ ಕಡ್ಡಾಯ ಅಲ್ಲ ಎಂದಿದ್ದರು. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಮಕ್ಕಳಿಂದ ಆಧಾರ್ ಮಾಹಿತಿಯನ್ನು ಕಟ್ಟುನಿಟ್ಟಾಗಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಮಕ್ಕಳ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವ ಪ್ರಕ್ರಿಯೆ ಎರಡು ತಿಂಗಳ ಹಿಂದೆಯೇ ಪ್ರಾರಂಭವಾಗಿತ್ತು. ಅದು ಪರಿಪೂರ್ಣವಾಗಿರಲಿಲ್ಲ. ಈ ಬಗ್ಗೆ ಆಕ್ಷೇಪಣೆ ಎತ್ತಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರು, ಅತಿ ಕನಿಷ್ಠ ಗಡುವಿನಲ್ಲಿ ಆಧಾರ್ ಮಾಹಿತಿ ಸಂಗ್ರಹದ ಚಿತ್ರಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಮಧ್ಯೆ ರಾಜ್ಯದಲ್ಲಿ 5 ರಿಂದ 17 ವಯಸ್ಸಿನ ಮಕ್ಕಳಿಗೆ ನೀಡಿದ್ದ ಆಧಾರ್ ಸಂಖ್ಯೆಯನ್ನು ಯುಐಡಿಎಐ ಸಂಸ್ಥೆಯಿಂದ ಪಡೆದು ದತ್ತಾಂಶ ಅವಲೋಕಿಸಿರುವ ಅಧಿಕಾರಿಗಳು, ಕಾರ್ಡ್ ಹೊಂದಿರುವ ಹಾಗೂ ನೋಂದಣಿ ಮಾಡಿ ಕಾರ್ಡ್ ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಬಹಳಷ್ಟಿದೆ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಆದರು  ಈಗಾಗಲೇ ಲಭ್ಯವಿರುವ ಮಕ್ಕಳ ಆಧಾರ್ ಸಂಖ್ಯೆಯನ್ನು ಶಾಲಾ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಕ್ರೋಢೀಕರಿಸಿ ಸರ್ಕಾರಕ್ಕೆ ವರದಿ ಮಾಡಲು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಅಲ್ಲದೇ ನ.5 ರೊಳಗೆ ಮಾಹಿತಿ ನೀಡುವಂತೆ ಒಂದು ವಾರದ ಗಡುವು ವಿಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com