

ಬೆಂಗಳೂರು: ತೊಗರಿ ಬೇಳೆ, ಉದ್ದಿನ ಬೇಳೆ, ಈರುಳ್ಳಿ ನಂತರ ಬೆಲೆ ಏರಿಕೆ ಸರದಿ ಅಕ್ಕಿಯದ್ದಾಗಿದೆ. ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ಮೂರು ತಿಂಗಳಲ್ಲಿ ಅಕ್ಕಿ ಬೆಲೆ ದುಪ್ಪಟ್ಟಾಗಲಿದೆ ಎಂದು ಅಸೊಚಾಮ್ ಎಚ್ಚರಿಸಿದೆ.
ಹೆಚ್ಚು ಪ್ರಮಾಣದಲ್ಲಿ ಭತ್ತ ಬೆಳೆಯುವ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆಯಾಗಿಲ್ಲ. ಮಳೆ ಕೊರತೆ ಪರಿಣಾಮ ಬರ ಪರಿಸ್ಥಿತಿ ತಲೆದೋರಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ
ಕಳೆದ 3 ವರ್ಷಗಳಿಂದ ಅಕ್ಕಿ ಉತ್ಪಾದನೆ ಕುಂಠಿತವಾಗಿದೆ. 2012ರಲ್ಲಿ 24.59 ಮೆಟ್ರಿಕ್ ಟನ್ ಇದ್ದ ಅಕ್ಕಿ ದಾಸ್ತಾನು ಈಗ 13.89 ಮೆಟ್ರಿಕ್ ಟನ್ ಇದೆ. ಮುಂಗಾರು ಕೊರತೆ ಪರಿಣಾಮ ಕೃಷಿ ಉತ್ಪನ್ನ ಮತ್ತು ಬೆಲೆ ಮೇಲೆ ನೇರ ಪರಿಣಾಮ ಬೀರಿದೆ. ದೇಶಕ್ಕೆ ಪ್ರತಿ ತಿಂಗಳಿಗೆ 8.5 ರಿಂದ 9 ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಇದೇ ಬಗೆಯಲ್ಲಿ ಲೆಕ್ಕ ಮಾಡಿದರೆ ವಾರ್ಷಿಕವಾಗಿ 108 ಮೆಟ್ರಿಕ್ ಟನ್ ಅಕ್ಕಿ ಬೇಕು. ಆದರೆ ಈಗಿರುವ ಸಂಗ್ರಹ ಲೆಕ್ಕಾಚಾರಕ್ಕೆ ಸಾಕಾಗುವುದಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.