ರೈತಸ್ನೇಹಿ ಸಂಶೋಧನೆ ಬೇಕು: ಧ್ರುವನಾರಾಯಣ

ಕಿಕ್ಕಿರಿದು ತುಂಬಿದ ಜನಸಾಗರ. ಮಹಿಳೆಯರ ಕೈಯಲ್ಲಿ ಮನೆ ಅಲಂಕಾರಿಕ ಗಿಡ, ಬಗೆಬಗೆಯ ಹೂ ಸಸಿಗಳು. ಮತ್ಸ್ಯಲೋಕದಲ್ಲಿ ಬಣ್ಣಬಣ್ಣದ...
ಕೃಷಿ ಮೇಳದಲ್ಲಿ ಪ್ರದರ್ಶನ ವೀಕ್ಷಿಸುತ್ತಿರುವ ಯುವತಿಯರು(ಸಾಂದರ್ಭಿಕ ಚಿತ್ರ)
ಕೃಷಿ ಮೇಳದಲ್ಲಿ ಪ್ರದರ್ಶನ ವೀಕ್ಷಿಸುತ್ತಿರುವ ಯುವತಿಯರು(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಕಿಕ್ಕಿರಿದು ತುಂಬಿದ ಜನಸಾಗರ. ಮಹಿಳೆಯರ ಕೈಯಲ್ಲಿ ಮನೆ ಅಲಂಕಾರಿಕ   ಗಿಡ, ಬಗೆಬಗೆಯ ಹೂ ಸಸಿಗಳು. ಮತ್ಸ್ಯಲೋಕದಲ್ಲಿ ಬಣ್ಣಬಣ್ಣದ ಮೀನುಗಳ ಚಿನ್ನರ ಚಿನ್ನಾಟ.  ಹಳ್ಳಿಯ ಸೊಗಡು ಪೇಟೆಯ ಜನಕ್ಕೆ ಪರಿಚಯಿಸಿದ ಹಳ್ಳಿ ಸಂತೆಯಲ್ಲಿ ಮಹಾರಾಷ್ಟ್ರದ ಕಿತ್ತಳೆ  ಹಣ್ಣಿನ  ಮಾರಾಟ ಬಲು ಜೋರು. ಹೊಲ ಉಳುಮೆ  ಮಾಡಲು ಬೇಕಾದ ವಿವಿಧ  ಯಂತ್ರೋಪಕರಣಗಳ, ಬೀಜ, ಗೊಬ್ಬರ ಬಗ್ಗೆ  ಮಾಹಿತಿ ಪಡೆಯುತ್ತಿದ್ದ ರೈತಾಪಿ ಜನರ ದಂಡೇ  ಅಲ್ಲಿ ನೆರೆದಿತ್ತು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಕೃಷಿ ಮೇಳದಲ್ಲಿ ಶುಕ್ರವಾರ ಕಂಡು ಬಂದ  ದೃಶ್ಯಗಳಿವು. ಮೇಳಕ್ಕೆ ಮೊದಲನೇ ದಿನ ಕವಿದ ವರುಣ ಮತ್ತು ಮೋಡ ಮುಸುಕಿದ  ವಾತಾವರಣ ಕೃಷಿಕರು ಇತ್ತ ಕಡೆ ಹೆಜ್ಜೆ ಹಾಕದಂತೆ ಮಾಡಿತ್ತು.ಶುಕ್ರವಾರ ಸೂರ್ಯ ಮೋಡದ  ಮರೆಯಿಂದ  ಈಚೆ ಬಂದಿದ್ದರಿಂದ ನಗರದ ಜನತೆಯೊಂದಿಗೆ ನಾಡಿನ ವಿವಿಧ ಜಿಲ್ಲೆಗಳಿಂದ  ಆಗಮಿಸಿದ ರೈತ ಬಾಂಧವರು ಕೃಷಿ ಮೇಳಕ್ಕೆ ಲಗ್ಗೆಯಿಟ್ಟರು. ತಮ್ಮ ಜಮೀನಿನ ಮಣ್ಣು, ನೀರಿಗೆ ಅನುಗುಣವಾಗಿ ಯಾವ ಬೆಳೆ ಬೆಳೆದರೆ ಹೆಚ್ಚು ಆದಾಯ, ಉತ್ತಮ ಇಳುವರಿ ಪಡೆಯುವ ಕುರಿತು  ಅಧಿಕಾರಿಗಳು ಮತ್ತು ಸಂಶೋಧಕರಿಂದ ಮಾಹಿತಿ ಪಡೆದುಕೊಂಡರು.

ರೈತ ಸ್ನೇಹಿ ಸಂಶೋಧನೆಗೆ ಕರೆ: ವಿಜ್ಞಾನಿಗಳು ರೈತಸ್ನೇಹಿ ಸಂಶೋಧನೆ ಕೈಗೊಳ್ಳಬೇಕು.   ಸಂಶೋಧನೆಯ ಮಾದರಿಯನ್ನು ರೈತರು ಸಮರ್ಪಕವಾಗಿ ಅಳವಡಿಸಿಕೊಳ್ಳುವಂತೆ   ನೋಡಿಕೊಳ್ಳಬೇಕು ಎಂದು ಚಾಮರಾಜನಗರದ ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ ಹೇಳಿದರು.

ಹಸಿರು ಕ್ರಾಂತಿಯ ಸುವರ್ಣ ಮಹೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ರೈತರು ತೀವ್ರ ಮಳೆ ಕೊರತೆ ಎದುರಿಸಿ ತೀವ್ರ ತೊಂದರೆಯಲ್ಲಿದ್ದಾರೆ. ಹೀಗಾಗಿ ಕಡಿಮೆ ನೀರಿನಲ್ಲಿ ಬೆಳೆ ತಗೆಯುವ ಸಮಗ್ರ  ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ವೈಜ್ಞಾನಿಕ ಮಾರುಕಟ್ಟೆ ಅವಶ್ಯ: ಮಧ್ಯಾಹ್ನ ನಡೆದ ತಾಂತ್ರಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಧಾರವಾಡ ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ.ಎಂ. ಮಹದೇವಪ್ಪ, ರಾಜಕಾರಣಿಗಳು ಮತ್ತು ವ್ಯಾಪಾರಸ್ಥರು ರೈತರಿಗೆ ಗೌರವ ನೀಡುತ್ತಿಲ್ಲ. ಹಸಿರು ಕ್ರಾಂತಿ ಹರಿಕಾರ ಸ್ವಾಮಿನಾಥನ್ ಅವರ ಕೃಷಿ ಉತ್ಪನ್ನ ಮಾರಾಟದ ವರದಿಯನ್ನು ಯಾವ ಸರ್ಕಾರವೂ ಜಾರಿಗೆ ತಂದಿಲ್ಲ. ಹೀಗಾಗಿ ಕೃಷಿ ಉದ್ಯಮ ನಷ್ಟದಲ್ಲಿ ಸಾಗುತ್ತಿದೆ. ಆದ್ದರಿಂದ ಕೃಷಿ ಅಭಿವೃದ್ಧಿಗೆ ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆ ಜಾರಿಗೆ  ತರಬೇಕು ಎಂದರು.

ಪ್ರಶಸ್ತಿ ಪ್ರದಾನ

ಚಾಮರಾಜನಗದ ಜಿಲ್ಲಾ ಮಟ್ಟದ ರೈತ ಪ್ರಶಸ್ತಿಯನ್ನು ಜಯಸುಂದರ ನಾಯ್ಡು ಹಾಗೂ ರೈತ ಮಹಿಳೆ ಪ್ರಶಸ್ತಿಯನ್ನು ಬೊಮ್ಮಮ್ಮ ಅವರು ಪಡೆದುಕೊಂಡರು. ಮೈಸೂರು ಜಿಲ್ಲೆಯ ಪಿ. ರಮೇಶ್, ಭಾಗ್ಯಮ್ಮ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೇಶದಲ್ಲಿ ರೈತನ ಬದುಕು ದಯನೀಯ ಸ್ಥಿತಿಯಲ್ಲಿದೆ. ಹಗಲಿರುಳು ದುಡಿದು ಬೆವರು ಸುರಿಸಿ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ  ಗುತ್ತಿಲ್ಲ. ಪ್ರಕೃತಿಯ ಜೊತೆಗೆ ಮಾರುಕಟ್ಟೆಯೂ ರೈತನ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ.  ಕೃಷಿ ಜೊತೆಗೆ ಉಪ ಕಸುಬು ಕೈಗೊಳ್ಳುವ ಮೂಲಕ ರೈತರು ಆರ್ಥಿಕ ಭದ್ರತೆ ಪಡೆದುಕೊಳ್ಳಬೇಕು.
●ಪ್ರೊ. ಎಂ ವಿ ರಾಜೀವ್‍ಗೌಡ, ರಾಜ್ಯಸಭೆ ಸದಸ್ಯ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com