

ಬೆಂಗಳೂರು: ಹಾಡಹಗಲೇ ರೌಡಿ ಶೀಟರ್ ಒಬ್ಬನನ್ನುಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶನಿವಾರ ನಗರದ ಸುದ್ದಗುಂಟಪಾಳ್ಯದ ಬೋವಿ ಕಾಲೋನಿಯಲ್ಲಿ ನಡೆದಿದೆ.
ಹತ್ಯೆಗೀಡಾದ ರೌಡಿ ಶೀಟರ್ ದೀಪು ಅಲಿಯಾಸ್ ಕಳ್ಳದೀಪು (25) ಎಂದು ಗುರುತಿಸಲಾಗಿದ್ದು, ಈತನ ವಿರುದ್ದ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಹಾಕಲಾಗಿತ್ತು.
ಹಳೆ ದ್ವೇಷದ ಹಿನ್ನಲೆಯಲ್ಲಿ ರೌಡಿ ಶೀಟರ್ ನನ್ನು ಹತ್ಯೆ ಮಾಡಿಲಾಗಿದೆ ಎನ್ನಲಾಗುತ್ತಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.