ಫೋನ್‍ನಲ್ಲಿ ಮಾತನಾಡುವುದು ಮುಗಿದ ಬಳಿಕ ಬೈಕ್ ಹತ್ತಿರ ಬಂದ ಲೋಹಿತ್, ಡಿಕ್ಕಿ ಮುರಿದಿರುವುದು ಕಂಡಿದೆ. ಜತೆಗೆ ಅದರಲ್ಲಿ ಹಣ ಕೂಡ ಇರಲಿಲ್ಲ. ಕೂಡಲೇ ಸೆಕ್ಯುರಿಟಿ ಗಾರ್ಡ್ ಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರು ಸೇರಿ ಸುತ್ತಮುತ್ತ ಹುಡುಕಾಟ ನಡೆಸಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೊಲೀಸರು ಬ್ಯಾಂಕ್ ನಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಲೋಹಿತ್ ಅವರು ಹಣ ಡ್ರಾ ಮಾಡಿಕೊಂಡು ಹೊರಗೆ ಬಂದಿರುವ ಎಲ್ಲಾ ಚಲನವಲನ ಗಮನಿಸಿರುವವರೇ ಕೃತ್ಯ ಎಸಗಿರಬಹುದು ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.