

ಬೆಂಗಳೂರು: ಅಪರಾಧ ಕೃತ್ಯವೊಂದರಲ್ಲಿ ಅದಾಗಲೇ ಜೈಲಿಗೆ ಹೋಗಿ ಬಂದಿದ್ದ ಮಹಿಳೆಯೊಬ್ಬಳು, ತನ್ನ ಸಹಚ ರರನ್ನು ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿ ತನ್ನ ಸ್ನೇಹಿತೆಯ ಮನೆಗೇ ಕಳುಹಿಸಿ ದರೋಡೆ ಮಾಡಿಸಿದ ಕತೆ ಇದು. ಈ ಕೃತ್ಯಕ್ಕಾಗಿ ಆಕೆ ಮತ್ತೊಮ್ಮೆ ಜೈಲು ಸೇರಿದ್ದಾಳೆ.
ಕನಕಪುರ ರಸ್ತೆಯ ಜಿ.ಶಿಲ್ಪಾ (26) ನಂದಿನಿ ಲೇ ಜೌಟ್ ನ ಗೀತಾ (26), ತಿಗಳರಪಾಳ್ಯ ಮುಖ್ಯ ರಸ್ತೆ ನಿವಾಸಿ ಜಗದೀಶ (22), ರಾಜಗೋಪಾಲನಗರದ ಕೆ.ಎಸ್.ಚೇತನ್ (19) ಆನಂದ (22) ಬಂಧಿತರು. ಆರೋಪಿಗಳಿಂದ ರು.5ಲಕ್ಷ ಮೌಲ್ಯದ 143 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ ಆಭರಣ ಹಾಗೂ ರು.40 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.
ಇಬ್ಬರೂ ಜೈಲು ಜೋಡಿಗಳು: ಪ್ರಕರಣ ವೊಂದರಲ್ಲಿ ವಿನುತಾ ಎಂಬುವವರು 2014ರಲ್ಲಿ ಜೈಲು ಸೇರಿದ್ದರು. ಮತ್ತೊಂದೆಡೆ ಆರೋಪಿ ಶಿಲ್ಪಾ ಕೂಡಾ ಸರಗಳ್ಳನಿಗೆ ನೆರವು ನೀಡಿದ ಆರೋಪದಲ್ಲಿ ಬಂಧಿಯಾಗಿದ್ದಳು. ಈ ಇಬ್ಬರಿಗೂ ಜೈಲಿನಲ್ಲೇ ಪರಿಚಯವಾಗಿತ್ತು. ಜೈಲಿಂದ ಬಿಡುಗಡೆಯಾದಮೇಲೂ ಇಬ್ಬರ ನಡುವಿನ ಸ್ನೇಹ ಮುಂದುವರಿದಿತ್ತು. ಸ್ನೇಹಿತರಾಗಿದ್ದ ಕಾರಣ ವಿನುತಾ ಮನೆಗೆ ಶಿಲ್ಪಾ ಆಗಾಗ ಹೋಗಿ ಬರುತ್ತಿದ್ದಳು. ಅಲ್ಲದೇ ವಿನುತಾ ಅವರ ಮೈಮೇಲಿದ್ದ ಚಿನ್ನಾಭರಣ, ಮನೆಯಲ್ಲಿದ್ದ ಹಣ, ಒಡವೆಗಳನ್ನು ಶಿಲ್ಪಾ ಗಮನಿಸಿದ್ದಳು. ಹೀಗಿರುವಾಗಲೇ ಶಿಲ್ಪಾ ತನ್ನ ಸ್ನೇಹಿತೆ ವಿನುತಾ ಅವರ ಬಳಿ ``ನಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ. ನನಗೆ ರು.20 ಸಾವಿರ ಹಣ ಕೊಡು,'' ಎಂದು ಕೇಳಿದ್ದಳು. ಆದರೆ, ವಿನುತಾ ``ಹಣ ಇಲ್ಲ... ಮುಂದಿನ ವಾರ ಕೊಡುತ್ತ ನೆ,'' ಎಂದು ಹೇಳಿದ್ದಳು.
ಅಲ್ಲಿವರೆಗೆ ತಾಳಿಕೊಳ್ಳದ ಶಿಲ್ಪಾ, ಸ್ನೇಹಿತೆ ವಿನುತಾಳ ಮನೆಯನ್ನೇ ದೋಚುವ ದುರಾಲೋ ಚನೆಗೆ ಬಿದ್ದಳು. ಇದಕ್ಕಾಗಿ ಯೋಜನೆ ರೂಪಿಸಿದ ಶಿಲ್ಪಾ, ಒಂದು ತಂಡವನ್ನೇ ರಚಿಸಿ ಕೊಂಡು ಕಾರ್ಯಚರಣೆ ನಡೆಸಿದ್ದಾಳೆ. ಮನೆ ಪರಿಶೀಲಿಸುವ ನಾಟಕವಾಡಿದಳು: ಈ ಕೃತ್ಯಕ್ಕಾಗಿ ಶಿಲ್ಪಾ ತನ್ನ ಸಹಚರರಾದ ಆನಂದ್, ಜಗದೀಶ್ , ಚೇತನ್, ಗೀತಾ ಎಂಬುವವರನ್ನು ಸೇರಿಸಿಕೊಂಡಳು. ಇದಕ್ಕಾಗಿ ತಲಾ ರು.10 ಸಾವಿರ ಕೊಡುವುದಾಗಿ ಪುಸಲಾಯಿಸಿದಳು. ಅ.1ರಂದು ವಿನುತಾಗೆ ಕರೆ ಮಾಡಿದ್ದ ಶಿಲ್ಪಾ ತನ್ನ ಸ್ನೇಹಿತೆ ಗೀತಾಳೊಂದಿಗೆ ಮನೆಗೆ ಬರುತ್ತಿ ರುವುದಾಗಿ ತಿಳಿಸಿದ್ದಳು. ಸಂಚಿನ ಬಗ್ಗೆ ತಿಳಿಯದ ವಿನುತಾ ಇಬ್ಬರನ್ನೂ ಆಮಂತ್ರಿಸಿ ದ್ದಳು. ಮನೆಗೆ ಬಂದ ಶಿಲ್ಪಾ ಮತ್ತು ಗೀತಾ, ವಿನುತಾ ಅವರ ಮನೆಯಲ್ಲಿ ಯಾರೂ ಇಲ್ಲದಿ ರುವುದರನ್ನು ಖಚಿತಿಪಡಿಸಿಕೊಂಡು ಮನೆಯಿಂ ದ ಹೊರಟು, ತನ್ನ ಸಹಚರರಿಗೆ ದರೋಡೆ ಮಾಡುವಂತೆ ಸಂದೇಶ ರವಾನಿಸಿದ್ದಳು.