ಬೆಂಗಳೂರು: ರಾಜ್ಯದಲ್ಲಿ 2016ರ ಮಾರ್ಚ್ 31ರೊಳಗೆ ಎಲ್ಲಾ ಸಾರಿಗೆ ವಾಹನಗಳಿಗೆ ಕಡ್ಡಾಯವಾಗಿ `ಸ್ಪೀಡ್ ಗವರ್ನರ್' ಅಳವಡಿಸುವುದಾಗಿ ಸರ್ಕಾರ ಹೈಕೋರ್ಟ್‍ಗೆ ಬುಧವಾರ ಪ್ರಮಾಣ ಪತ್ರ ಸಲ್ಲಿಸಿದೆ.
ಈ ಸಂಬಂಧ 2015ರ ಆ.11ರಂದು ಹೊರಡಿಸಿದ ಅಧಿಸೂಚನೆಯ ಸಮರ್ಪಕ ಜಾರಿಗೆ ರಾಜ್ಯ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಎಚ್ ಎಎಲ್‍ನ ನಿವೃತ್ತ ನೌಕರ ವೈ.ಎನ್.ನಂಜಪ್ಪ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರ ಈ ಪ್ರಮಾಣ ಪತ್ರ ಸಲ್ಲಿಸಿದೆ.
ಅಲ್ಲದೆ, ಸ್ಪೀಡ್ ಗವರ್ನರ್ ಸಾಧನ ಅಳವಡಿಸದ ಹಳೆಯ ಸಾರಿಗೆ ವಾಹನಗಳಿಗೆ ಸಾಮರ್ಥ್ಯ ಪ್ರಮಾಣ ಪತ್ರ ನೀಡಲಾ-ಗುವುದಿಲ್ಲ ಎಂದು ಸರ್ಕಾರ ಇದೇ ವೇಳೆ ಹೈಕೋರ್ಟ್‍ಗೆ ಭರವಸೆ ನೀಡಿದೆ.