ಸಿಎಂ-ಪರಂ ಸೇರಿ ಮೇಯರ್ ಆಯ್ಕೆ: ಸಿ.ಟಿ. ಸೋಮಶೇಖರ್

ಬಿಬಿಎಂಪಿ ಮೇಯರ್ ಯಾರಾಗಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಚಿವ ರಾಮಲಿಂಗಾರೆಡ್ಡಿ ತೀರ್ಮಾನಿಸಲಿದ್ದಾರೆ ಎಂದು ಶಾಸಕ ಸಿ.ಟಿ. ಸೋಮಶೇಖರ್ ತಿಳಿಸಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ (ಸಂಗ್ರಹ ಚಿತ್ರ)
Updated on: 

ಮಡಿಕೇರಿ: ಬಿಬಿಎಂಪಿ ಮೇಯರ್ ಯಾರಾಗಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಚಿವ ರಾಮಲಿಂಗಾರೆಡ್ಡಿ ತೀರ್ಮಾನಿಸಲಿದ್ದಾರೆ ಎಂದು ಶಾಸಕ ಸಿ.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರ ಜಂಟಿ ಸಭೆಯನ್ನು ಸೆ.10ರಂದು ರಾತ್ರಿ ಬೆಂಗಳೂರಿನಲ್ಲಿ ಉಭಯ ಪಕ್ಷಗಳ ನಾಯಕರ ಸಮ್ಮುಖದಲ್ಲಿ ನಡೆಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಮಡಿಕೇರಿಯ ಎರಡು ರೆಸಾರ್ಟ್‍ಗಳಲ್ಲಿ ತಂಗಿರುವ ಬಿಬಿಎಂಪಿ ಕಾಂಗ್ರೆಸ್ ಸದಸ್ಯರ ತಂಡದ ನೇತೃತ್ವ ವಹಿಸಿರುವ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಾಸಕ ಸೋಮಶೇಖರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಈಗಾಗಲೇ 72 ಕಾರ್ಪೊರೇಟರ್‍ಗಳು ಮಡಿಕೇರಿಯ ಎರಡು ರೆಸಾರ್ಟ್‍ಗಳಲ್ಲಿ ಮೂರು ದಿನಗಳಿಗಾಗಿ ಬಂದಿದ್ದಾರೆ ಎಂದರು.

ಭ್ರಷ್ಟಾಚಾರದಲ್ಲಿ ಸಕ್ರಿಯವಾಗಿರುವ ಬಿಜೆಪಿಯನ್ನು ಬಿಬಿಎಂಪಿ ಅಧಿಕಾರದಿಂದ ಹೊರಕ್ಕಿಡಲು ನಮ್ಮ ಪಕ್ಷದ ಸದಸ್ಯರಿಗೆ ಮಾನಸಿಕ ಒತ್ತಡವಾಗದಂತೆ ಬೆಂಗಳೂರಿನಿಂದ ಹೊರಕ್ಕೆ ಕರೆತರಲಾಗಿದೆ. ನಮ್ಮ ಸದಸ್ಯರಿಗೆ ಆಗಿಂದಾಗ್ಗೆ ಬಿಜೆಪಿಯಿಂದ ಆಮಿಷಗಳು ಬರುತ್ತಲೇ ಇದ್ದವು. ಹೀಗಾಗಿ ಸದಸ್ಯರ ಕೋರಿಕೆಯ ಮೇರೆಗೆ ಅವರನ್ನು ಇಂಥ ಒತ್ತಡ, ಆಮಿಷಗಳಿಂದ ದೂರವಿಡಲು ಮಡಿಕೇರಿಯ ರೆಸಾರ್ಟ್‍ಗೆ ಕರೆತಂದಿದ್ದೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com