ಜೋಗದ ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ

ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗದ ಶರಾವತಿ ವಿದ್ಯುದಾಗಾರದಲ್ಲಿ ಗುರುವಾರ ಅಗ್ನಿ ಅನಾಹುತ...
ಶರಾವತಿ ವಿದ್ಯುದಾಗಾರ
ಶರಾವತಿ ವಿದ್ಯುದಾಗಾರ
Updated on: 
ಸಾಗರ: ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗದ ಶರಾವತಿ ವಿದ್ಯುದಾಗಾರದಲ್ಲಿ ಗುರುವಾರ ಅಗ್ನಿ ಅನಾಹುತ ಸಂಭವಿಸಿದೆ.
ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಜೋಗದ ಶರಾವತಿ ವಿದ್ಯುದಾಗಾರದಲ್ಲಿ ಶಾರ್ಟ್ ಸಕ್ಯೂಟಿನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಎಲ್ಲಾ 10 ಘಟಕಗಳ ವಿದ್ಯುತ್ ವಿತರಣಾ ಕೇಬಲ್ ಸುಟ್ಟುಹೋಗಿದೆ.
ಅಗ್ನಿ ಅನಾಹುತ ಸಂಭವಿಸಿದ ವೇಳೆ ಅಲ್ಲಿ ಮೂವರು ಇಂಜಿನಿಯರ್ ಗಳು ಮತ್ತು 20 ಸಿಂಬ್ಬಂದಿಗಳು ಸಿಕ್ಕಿಹಾಕಿಕೊಂಡಿದ್ದವರನ್ನು ರಕ್ಷಿಸಲಾಗಿದೆ. ಅದರಲ್ಲಿ ಮೂವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು. 
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡು, ಅಕ್ಕಪಕ್ಕದ ಹುಲ್ಲಿನ ಹಾಗೂ ಒಣಗಿದ ಪೊದೆಗಳಿಗೆ ಹರಡಿದೆ. ಇದು ಆಯಿಲ್ ಸಂಗ್ರಹ ಕೊಠಡಿಗೆ ವ್ಯಾಪಿಸಿ, ಕೊಠಡಿಯಲ್ಲಿದ್ದ ಪೆಟ್ರೋಲ್, ಡೀಸೆಲ್ ಡ್ರಮ್ ಗಳಿಗೆ ಬೆಂಕಿ ತಗುಲಿದೆ. ಇದರಿಂದಾಗಿ ವಿದ್ಯುದಾಗಾರದ ಕಂಟ್ರೋಲ್ ರೂಂ ಸಂಪೂರ್ಣ ಭಸ್ಮವಾಗಿದೆ. 
ಅಗ್ನಿ ಶಾಮಕ ಸೇವಾ ಸಿಬ್ಬಂದಿ ಹಾಗೂ ವಿದ್ಯುದಾಗಾರದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಅನಾಹುತದಿಂದಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದ್ದು, ಅಂದಾಜು ತಿಳಿದು ಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com