ಸುಪ್ರೀಂ ತೀರ್ಪಿನಂತೆ ಹೆಲ್ಮೆಟ್ ಕಡ್ಡಾಯ

ಸುಪ್ರೀಂ ಕೋರ್ಟ್ ತೀರ್ಪಿನನ್ವಯ ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆಯೇ ಹೊರತು ಬಿಜೆಪಿಗರು ಆರೋಪಿಸುವಂತೆ ಯಾವುದೇ ಹೆಲ್ಮೆಟ್ ಲಾಬಿಗಲ್ಲ. ಅಂತಹ ಲಾಬಿ ನಡೆದಿದ್ದರೆ ಅದು ಕೇಂದ್ರ ಸರ್ಕಾರವಿರುವ ದೆಹಲಿಯಲ್ಲಿರಬೇಕು ಎಂದು...
ಸಾರಿಗೆ ಸಚಿವ ಬಿ.ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ಬಿ.ರಾಮಲಿಂಗಾರೆಡ್ಡಿ
Updated on: 

ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನನ್ವಯ ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆಯೇ ಹೊರತು ಬಿಜೆಪಿಗರು ಆರೋಪಿಸುವಂತೆ ಯಾವುದೇ ಹೆಲ್ಮೆಟ್ ಲಾಬಿಗಲ್ಲ. ಅಂತಹ ಲಾಬಿ ನಡೆದಿದ್ದರೆ ಅದು ಕೇಂದ್ರ ಸರ್ಕಾರವಿರುವ ದೆಹಲಿಯಲ್ಲಿರಬೇಕು ಎಂದು ಸಾರಿಗೆ ಸಚಿವ ಬಿ.ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟಿನ ರಸ್ತೆ ಸುರಕ್ಷತೆ ಸಮಿತಿಯು 21 ಸದಸ್ಯರನ್ನು ಒಳಗೊಂಡಂತೆ ರಚನೆಯಾಗಿ ವಿಸ್ತøತವಾಗಿ ಚರ್ಚಿಸಿ ದೇಶಾದ್ಯಂತ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸು ಪುರಸ್ಕರಿಸಿದ ನ್ಯಾಯಾಲಯವು ದೇಶಾದ್ಯಂತ ಕಾನೂನು ಜಾರಿಗೆ ಸೂಚಿಸಿದೆ.

ಅದ್ದಕ್ಕಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಒರಿಸ್ಸಾ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಜಾರಿಗೊಳಿಸಲಾಗಿದೆ. ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ಖಡಕ್ ಆದೇಶ ಬಂದ ಹಿನ್ನೆಲೆಯಲ್ಲಿ ಡಿಸೆಂಬರ್ 28 ರಂದು ಅಧಿಸೂಚನೆ ಹೊರಡಿಸಲಾಯಿತು ಎಂದು ಸಚಿವರು ಸ್ಪಷ್ಟನೆ ನೀಡಿದರು.

ಶೀಘ್ರದಲ್ಲಿಯೇ ಕಡ್ಡಾಯ: ಸುಪ್ರೀಂ ಕೋರ್ಟಿನ ಆದೇಶದಂತೆ ಡಿಸೆಂಬರ್ 28 ರಂದೇ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಅಧಿಸೂಚನೆ ಹೊರಡಿಸಿದ 15 ದಿನಗಳೊಳಗೆ ಕಾನೂನು ಪಾಲಿಸಬೇಕಾದದ್ದು ನಾಗರಿಕರ ಕರ್ತವ್ಯ.

ಏಕಾಏಕಿ ಈ ಕಾನೂನು ಜಾರಿಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗಬಹುದು. ಅದಕ್ಕಾಗಿ ಸ್ವಲ್ಪ ಸಮಯವಾಕಾಶ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಸರ್ಕಾರ ನೀಡುವ ಗಡುವು ಮುಗಿದ ಬಳಿಕವೂ ವಾಹನ ಸವಾರ ಮತ್ತು ಹಿಂಬದಿ ಸವಾರ ನಿಯಮ ಉಲ್ಲಂಘಿಸಿದರೆ ಮೊದಲ ಬಾರಿಗೆ ರು.100, ಎರಡನೇ ಬಾರಿಗೆ ರು.200 ಹಾಗೂ ಮೂರನೇ ಬಾರಿಗೆ ರು.300 ಮತ್ತು ಚಾಲನಾ ಪರವಾನಗಿ ರದ್ದುಪಡಿಸುವ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಹಿಂಬದಿ ಸವಾರ ಹೆಲ್ಮೆಟ್ ಹಾಕಲಿಲ್ಲ ಅಂದರೆ ವಾಹನ ಸವಾರನಿಗೆ ದಂಡ ಬೀಳಲಿದೆ ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com