ರು.1.93 ಲಕ್ಷ ದರೋಡೆ

ನೈಸ್ ರಸ್ತೆಯಲ್ಲಿ ಬೈಕ್ ನಲ್ಲಿಸಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬೆದರಿಸಿರುವ ಮೂವರು ದುಷ್ಕರ್ಮಿಗಳು ಬೈಕ್ ಡಿಕ್ಕಿಯಲ್ಲಿದ್ದ ರು.1.93ಲಕ್ಷ ಹಣ ಕಸಿದು ಪರಾರಿಯಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ನೈಸ್ ರಸ್ತೆಯಲ್ಲಿ ಬೈಕ್ ನಲ್ಲಿಸಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬೆದರಿಸಿರುವ ಮೂವರು ದುಷ್ಕರ್ಮಿಗಳು ಬೈಕ್ ಡಿಕ್ಕಿಯಲ್ಲಿದ್ದ ರು.1.93ಲಕ್ಷ ಹಣ ಕಸಿದು ಪರಾರಿಯಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಹೊಸೂರು ರಸ್ತೆಯ ಹುಸೂರು ಗೇಟ್ ನಿವಾಸಿ ಗುರುಮೂರ್ತಿ (39) ಹಮ ಕಳೆದುಕೊಂಡವರು. ಕಳೆದ 8 ವರ್ಷಗಳಿಂದ ಕುಂಬಳಗೊಡಿನಲ್ಲಿರುವ ತ್ರಿಶೂಲ್ ಕಾಂಕ್ರಿಟ್ ಪ್ಲಾಂಟ್ ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಗುರುವಾರ ಕೆಲಸ ಮುಗಿದ ಬಳಿಕ ಸಂಗ್ರಹವಾಗಿದ್ದ ಹಣವನ್ನು ತಮ್ಮ ಆಕ್ಟಿವಾ ಹೊಂಡಾದ ಡಿಕ್ಕಿಯಲ್ಲಿ ಹಾಕಿಕೊಂಡು ಪ್ಲಾಂಟ್ ನಿಂದ ಮನೆಗೆ ಹೊರಟಿದ್ದರು.

ಈ ವೇಳೆ ಮೊಬೈಲ್ ನಲ್ಲಿ ಮಾತನಾಡಲು ಬೈಕ್ ರಸ್ತೆ ಬದಿ ನಿಲ್ಲಿಸಿ ಮಾತನಾಡುತ್ತಿದ್ದರು. ಈ ವೇಳೆ ಒಂದೇ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಗುರುಮೂರ್ತಿ ಬಳಿಗೆ ಧಾವಿಸಿದ್ದಾರೆ. ಬಳಿಕ ಚಾಕು ತೋರಿಸಿ ಹೆದರಿಸಿ ಬೈಕ್ ಡಿಕ್ಕಿ ತೆರೆಯುವಂತೆ ಹೇಳಿದ್ದಾರೆ. ಇದಕ್ಕೆ ಪ್ರತಿರೋಧ ತೋರಿಸಿದಾಗ ಚಾಕು ಹಿಡಿದು ಗದರಿಸಿದ ದುಷ್ಕರ್ಮಿಗಳು, ಬೈಕ್ ಕೀ ಕಸಿದುಕೊಂಡು ಡಿಕ್ಕಿ ತೆರೆದು ಹಣದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದಾರೆ ಎಂದು ಪೊಲೀಸರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com