ಬೀದರ್

ಕಾಯಕದೊಂದಿಗೆ ಜ್ಞಾನ ಬೆರೆತಲ್ಲಿ ನೆಮ್ಮದಿ: ನಾಗೂರೆ

Published On :

ಬೀದರ್: ಕಾಯಕದ ಜಂಜಾಟದಲ್ಲಿ ತೇಲಾಡುತ್ತಿರುವ ನಮಗೆ ಜ್ಞಾನದ ಊಟ ಅವಶ್ಯಕ ಎಂದು ವೀರಶೈವ ಲಿಂಗಾಯತ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಡಾ. ಅಶೋಕಕುಮಾರ ನಾಗೂರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  ನಗರದ ಲಾಡಗೇರಿ ಹಿರೇಮಠದಲ್ಲಿ ಆಯೋಜಿಸಲಾಗಿರುವ 3ನೇ ದಿನದ ಕಲಬುರ್ಗಿ ಶರಣಬಸವೇಶ್ವರರ ಪುರಾಣ ಪ್ರವಚನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
  ಗದುಗಿನ ವೇದಮೂರ್ತಿ ಶಿವಲಿಂಗ ಶಾಸ್ತ್ರಿಗಳು ಶರಣಬಸವೇಶ್ವರ ಪುರಾಣ ಪ್ರವಚನ ಹೇಳಿ, ಕಲಬುರ್ಗಿ ಶರಣ ಬಸವೇಶ್ವರರು 191 ವರ್ಷಗಳ ಹಿಂದೆ ಈ ಭಾಗದಲ್ಲಿ ಜನಿಸಿ, ವೀರಶೈವ ಧರ್ಮದ ಪರಿಪಾಲನೆ ಮಾಡಿದ್ದಾರೆ ಎಂದು ಹೇಳಿ, ಈ ದೇಶದಲ್ಲಿ ಸಂತರು, ಶರಣರು, ಯೋಗಿಗಳು, ತ್ಯಾಗಿಗಳು ಹಾಗೂ ಮಠಾಧೀಶರು ಇರುವುದರಿಂದಲೇ ದೇಶ ಸಮೃದ್ದವಾಗಿದೆ. ಇದು ಜಗತ್ತಿಗೆ ಮಾರ್ಗದರ್ಶಕ ಗುರು ಸ್ವರೂಪಿ ಎಂದು ಬಣ್ಣಿಸಿದರು.
   ಶರಣರ ಸಂಗದಿಂದ ಶಾಂತಿ, ಸಮೃದ್ಧಿ ನೆಲೆಸಲು ಸಾಧ್ಯವಾಗಿದೆ ಈ ದೇಶದ ಮಹಿಳೆಯರಲ್ಲಿನ ಕುಂಕುಮ, ಕಾಲಂಗುರ, ಕೊರಳಲ್ಲಿನ ಮಾಂಗಲ್ಯ, ಹಣೆಯಲ್ಲಿನ ವಿಭೂತಿಯಲ್ಲಿ ಅಗಾಧ ಶಕ್ತಿಯಿದೆ ಆದರೆ ಅದು ಒಳ್ಳೆಯದಕ್ಕೆ ಉಪಯೋಗವಾಗಲಿ ಎಂದು ತಿಳಿಸಿದರು.
ಆದರ್ಶ ವ್ಯಕ್ತಿಯಾಗಿ: ಪ್ರತಿಯೊಬ್ಬರು ಜಾತಿ ಭೇದವೆನ್ನದೆ ಕೊರಳಲ್ಲಿ ರುದ್ರಾಕ್ಷಿ ಧರಿಸಿದೊಡೆ ದೀರ್ಘ ಆರೋಗ್ಯಿಯಾಗಿ ಬಾಳ ಬಹುದಾಗಿದೆ. ತಂದೆ ತಾಯಿ ಗುರು ಹಿರಿಯರಿಗೆ ಗೌರವಿಸಿದಲ್ಲಿ ಪರಿಪೂರ್ಣ ಹಾಗೂ ಆದರ್ಶ ವ್ಯಕ್ತಿಯಾಗಿ ಬೆಳೆಯಬಹುದಾಗಿದೆ ಎಂದು ಕರೆ ನೀಡಿದರು.
  ಲಾಡಗೇರಿ ಹಿರೇಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಶಿವಣಿ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿದರು. ಚಾಂಬೋಳದ ಶ್ರೀಗಳಾದ ಮುರುಘೇಂದ್ರ ಸ್ವಾಮಿಗಳು, ಸಾಯಗಾಂವ್ ಶಿವಾನಂದ ದೇವರು ಬಸಮುಖ ವಹಿಸಿದ್ದರು. ನಗರ ಸಭೆ ಸದಸ್ಯರಾದ ಮಾರ್ಟಿನ್ ವೇದಿಕೆ ಮೇಲಿದ್ದರು.
ಸನ್ಮಾನ: ಸಮಾಜ ರತ್ನ ಪ್ರಶಸ್ತಿ ಪುರಷ್ಕೃತರಾದ ಸಿದ್ದಪ್ಪ ಫುಲಾರಿ ಅವರಿಗೆ ಶ್ರೀಮಠದಿಂದ ಸನ್ಮಾನಿಸಿ ಆಶೀರ್ವದಿಸಲಾಯಿತು. ರಾಜಕುಮಾರ ಮರಖಲ್ ಹಾಗೂ ಚಂದ್ರಕಾಂತ ಗಡಿಕುಶನೂರ್ ಅವರಿಂದ ಪ್ರಾರ್ಥನೆ ಜರುಗಿತು. ಮಠದ ಹಿರಿಯ ಭಕ್ತರಾದ ಬಂಡೆಪ್ಪ ಗಿರಿ ಸ್ವಾಗತಿಸಿ ಪ್ರೊ. ಕುಮಾರ ಸ್ವಾಮಿ ಹಿರೇಮಠ ನಿರೂಪಿಸಿದರು.
  ಈ ಸಂದರ್ಭದಲ್ಲಿ ರಾಷ್ಟ್ರಿಯ ಯುವ ಪ್ರಶಸ್ತಿ ಪುರಸ್ಕೃತರಾದ ಶಿವಯ್ಯ ಸ್ವಾಮಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶಿವಕುಮಾರ ಸ್ವಾಮಿ, ಮಠದ ಸದ್ಭಕ್ತರಾದ ಬಂಡೆಪ್ಪ ಪಾಟೀಲ್, ಗದಗೆಪ್ಪ ಗುನ್ನಳ್ಳಿ, ಬಸಪ್ಪ ಹುಲ್ಲೆಪ್ಪನೋರ್, ಎಂಎನ್ ಹಿರೇಮಠ, ಕಾಶಿನಾಥ ಸ್ವಾಮಿ, ಶಿವಕುಮಾರ ಮುದ್ದಾ, ನಾಗಶೆಟ್ಟೆಪ್ಪ ಪಾಟೀಲ್, ಜಿಲ್ಲಾ ಚೆಸ್ ಸಂಸ್ಥೆ ಅಧ್ಯಕ್ಷ ವಿನಯಕುಮಾರ ಬಿರಾದಾರ್, ಶಂಕರರಾವ ಗಿರಿ, ಬಸವರಾಜ ಹೂಗೇರಿ, ಶರಣಪ್ಪ ಗುನ್ನಳ್ಳಿ ಸೇರಿದಂತೆ ಲಾಡಗೇರಿ, ಹಳ್ಳದಕೇರಿ ಹಾಗೂ ಹೂಗೇರಿ ಗ್ರಾಮಗಳ ಹಲವಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.