ಬೀದರ್

ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ

Published On :

ಬೀದರ್: ಬೆಂಬಲ ಬೆಲೆ ಯೋಜನೆಯಲ್ಲಿ ತೊಗರಿ ಅಭಿವೃದ್ಧಿ ಮಂಡಳಿ ಗುಲ್ಬರ್ಗದಿಂದ ಬೀದರ್‌ನ ಹೈದ್ರಾಬಾದ್ ರಸ್ತೆಯಲ್ಲಿರುವ ನೂತನ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ಬುಧವಾರ ತೊಗರಿ ಖರೀದಿಯನ್ನು ಆರಂಭಿಸಲಾಯಿತು.
  ತೊಗರಿ ಖರೀದಿಗೆ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವೀರೇಂದ್ರ ಪಾಟೀಲ್ ಗುನ್ನಳ್ಳಿ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿ, ತೊಗರಿ ಖರೀದಿ ಕೇಂದ್ರಕ್ಕೆ ತೊಗರಿ ಹಾಕುವ ರೈತರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಈ ಕುರಿತು ಖರೀದಿ ಕೇಂದ್ರದಲ್ಲಿಯೇ ಕೃಷ್ಣ ಗ್ರಾಮೀಣ ಬ್ಯಾಂಕ್‌ನವರಿಂದ ಖಾತೆ ತೆಗೆಯುವ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಗುಣಮಟ್ಟ: ತೊಗರಿಯನ್ನು ವಾಣಿಜ್ಯ ರೀತಿಯಲ್ಲಿ ಖರೀದಿಸುತ್ತಿರುವುದರಿಂದ ಕೇಂದ್ರದಲ್ಲಿ ಯಂತ್ರದಿಂದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರೈತರು ಸ್ವಚ್ಛಗೊಳಿಸಿದ ಗುಣಮಟ್ಟದ ತೊಗರಿಯನ್ನು ಮಾತ್ರ ಮಾರಾಟಕ್ಕೆ ತರಬೇಕು, ಖರೀದಿ ಕೇಂದ್ರದಲ್ಲಿ ತೊಗರಿ ತೂಕ ಮಾಡುವ ಹಮಾಲರಿಗೆ, ಸಿಬ್ಬಂದಿಗೆ ಯಾವುದೇ ಅನಧಿಕೃತ ರಿವಾಜು ತಳಗಾಳು (ಮಣ್ಣು ಕಾಳು) ನೀಡದಂತೆ ನೋಡಿಕೊಳ್ಳಿ. ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಕೂಡಲೇ ಎಪಿಎಂಸಿಗೆ ದೂರು ನೀಡಬೇಕೆಂದರು.
  ರೈತರ ಬೇಡಿಕೆಯಂತೆ ಗಾಂಧಿ ಗಂಜ್ ಮಾರುಕಟ್ಟೆಯಿಂದ ಖರೀದಿ ಕೇಂದ್ರವನ್ನು ಹಣು, ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ. ಖರೀದಿ ಪ್ರಕ್ರಿಯೆ ಮೊದಲ ದಿನವೇ 13 ರೈತರಿಂದ ಸುಮಾರು 131 ಚೀಲ ತೊಗರಿ ಖರೀದಿಸಲಾಯಿತೆಂದು ಅಧ್ಯಕ್ಷ ವೀರೇಂದ್ರ ಪಾಟೀಲ್ ಗುನ್ನಳ್ಳಿ ತಿಳಿಸಿದರು.
  ಈ ಸಂದರ್ಭದಲ್ಲಿ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಪ್ಪ, ಎನ್‌ಸಿಡಿಇಎಕ್ಸ್ ಸಿಬ್ಬಂದಿ, ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.