ಬೀದರ್

ಪಾಸ್ಟರ್‌ನಿಂದ ವಿಚ್ಛೇದಿತೆ ಮೇಲೆ ಅತ್ಯಾಚಾರ

Published On :

ಕ.ಪ್ರ ವಾರ್ತೆ ಬೀದರ್ ಮಾ.27
ನಗರದ ಹೊರ ವಲಯದಲ್ಲಿರುವ ಸಿಂಧೋಲ್ ಕಲ್ಯಾಣ ಮಂಟಪದ ಸಮೀಪ ವಿಚ್ಛೇದಿತೆಯ ಮೇಲೆ ಚರ್ಚ್‌ನ ಪಾಸ್ಟರ್‌ವೊಬ್ಬರು ಅತ್ಯಾಚಾರ ನಡೆಸಿದ್ದಾರೆಂದು ಇಲ್ಲಿನ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಜಾಮಪುರ ಮೂಲದ ಸದ್ಯ ಕಮಠಾಣಾದಲ್ಲಿ ವಾಸಿಸುತ್ತಿರುವ 27 ವರ್ಷದ ಮಹಿಳೆ ಮೋರ್ಗಿ ಗ್ರಾಮದ ಪಾಸ್ಟರ್ ಪ್ರಕಾಶ್ ವಿರುದ್ಧ ದೂರು ನೀಡಿದ್ದಾಳೆ. ಈಕೆ 5 ವರ್ಷಗಳ ಹಿಂದೆಯೇ ವಿವಾಹ ವಿಚ್ಛೇದನ ಪಡೆದಿದ್ದಾಳೆ. ಮಂಗಳವಾರ ಸಂಜೆ ಕೆಲವು ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ಮಾಡಿ, ಕಣ್ಣಿಗೆ ಬಟ್ಟೆ ಕಟ್ಟಿ ಆಟೋದಲ್ಲಿ ಒತ್ತಾಯಪೂರ್ವಕವಾಗಿ ಸಿಂಧೋಲ್ ಕಲ್ಯಾಣ ಮಂಟಪದ ಸಮೀಪಕ ಕರೆದುಕೊಂಡು ಹೋದರು. ಅಲ್ಲಿ ಸುಮಾರು 8 ಗಂಟೆಗೆ ಪಾಸ್ಟರ್ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ವಿಚ್ಚೇದಿತ ಮಹಿಳೆ ಗಾಂಧಿ ಗಂಜ್ ಪೊಲೀಸ್ ಸ್ಟೇಷನ್‌ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ವೈದ್ಯಕೀಯ ಪರೀಕ್ಷೆ: ಪ್ರಕರಣ ತನಿಖೆಯನ್ನು ನಗರದ ಮಾರ್ಕೆಟ್ ಸಿಪಿಐ ದತ್ತಾತ್ರೆಯ ಕಾರ್ನಾಡ್ ಕೈಗೆತ್ತಿಕೊಂಡಿದ್ದು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಮಹಿಳೆ ನೀಡಿದ ದೂರನ್ನು ಆಧರಿಸಿ ಪೊಲೀಸರು ಪಾಸ್ಟರ್ ಹಿನ್ನೆಲೆ, ಆ ದಿನದ ದಿನಚರಿಯ ಜಾಡು ಹಿಡಿದು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಮಧ್ಯೆ ಅತ್ಯಾಚಾರ ನಡೆದಿದೆ ಎನ್ನಲಾದ ಸಮಯದಲ್ಲಿ ಪಾಸ್ಟರ್ ಬೇರೊಂದು ಸ್ಥಳದಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎಂದು ಹೇಳಲಾಗಿದ್ದು, ಪ್ರಕರಣ ಮತ್ತಷ್ಟು ಶಂಕೆಗಳಿಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.