ಬೀದರ್: ಗಡಿ ರಕ್ಷಣಾ ಪಡೆಯ ಯೋಧರೊಬ್ಬರು ಅಸ್ಸಾಂನ ಕೋಕ್ರಾಝರ್ ಜಿಲ್ಲೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಜರುಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಪಲಾಪೂರ ಗ್ರಾಮದ ರಾಜಕುಮಾರ ಬಂಡೆಪ್ಪ ಭಾಲ್ಕೆ (34) ಮೃತಪಟ್ಟ ಯೋಧ. ಪಶ್ಚಿಮ ಬಂಗಾಳದ ರಾಯಪೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ, ಮದುವೆ ನಿಮಿತ್ತ ಒಂದು ತಿಂಗಳ ರಜೆ ತೆಗೆದುಕೊಂಡಿದ್ದರು. ಆದರೆ, ಅಸ್ಸಾಮ್ನ ಕೋಕ್ರೋಜಾ ಜಿಲ್ಲೆಯ ರೇಲ್ವೆ ನಿಲ್ದಾಣದಲ್ಲಿ ಅವರ ಶವ ಪತ್ತೆಯಾಗಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಶನಿವಾರ ಕೋಲ್ಕತಾದಿಂದ ಹೈದ್ರಾಬಾದ್ವರೆಗೆ ವಿಮಾನ ಮೂಲಕ ಯೋಧನ ಪಾರ್ಥಿವ ಶರೀರ ಬೀದರ್ಗೆ ತರಲಾಗುತ್ತಿದೆ.