ಚಿಕ್ಕಮಗಳೂರು

ವಿದ್ಯಾರ್ಥಿಗಳಿಗೆ ಉಳಿತಾಯ ಜಾಗೃತಿ ಕಾರ್ಯಕ್ರಮ

Published On :

ಮೂಡಿಗೆರೆ: ವಿದ್ಯಾರ್ಥಿ ಜೀವನದಲ್ಲೆ ಕೂಡಿಟ್ಟ ಹಣ ದೊಡ್ಡವರಾದ ಮೇಲೆ ಉಪಯೋಗಕ್ಕೆ ಬರುತ್ತದೆ. ಇಂದು ಉಳಿಸಿದ ಹಣ ಮುಂದೆ ಉಪಯೋಗಕ್ಕೆ ಬ್ಯಾಂಕ್ ಉಳಿತಾಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಬ್ಯಾಂಕ್ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ ಎಂದು ಭಾರತೀಯ ಎಸ್‌ಬಿಐ ವ್ಯವಸ್ಥಾಪಕ ಪಿ. ನೀಲಕಂಠ ತಿಳಿಸಿದರು.
ಬಿದರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಕೃಷಿ ಶಾಖೆ ಮೂಡಿಗೆರೆ ವತಿಯಿಂದ ಕಿರಿಯರ ಬ್ಯಾಂಕಿಗ್ ವಿತ್ತೀಯ ಸಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ ಹಾಗೂ ವಿತ್ತೀಯ ಜ್ಞಾನ ತಿಳುವಳಿಕೆ ಅರಿಯುವಲ್ಲಿ ಸಹಕಾರಿ ಆಗಲಿದೆ ಎಂದರು.
ಪ್ರಾಥಮಿಕ ಶಾಲೆಯ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬ್ಯಾಂಕಿಗ್ ಪ್ರಶ್ನಾವಳಿ ಕಾರ್ಯಕ್ರಮಕ್ಕೆ ಚಾಲನೇ ನೀಡಿದರು. ಈ ಸ್ಪರ್ಧೆಯಲ್ಲಿ ಬಿದರಹಳ್ಳಿ ಸ.ಹಿ. ಪ್ರಾ.ಶಾಲೆ. ಲೋಕವಳ್ಳಿ ಸ.ಹಿ. ಪ್ರಾ.ಶಾಲೆಯ ತಂಡ, ಹಳೆಕೋಟೆ, ಮುಗ್ರಹಳ್ಳಿ, ಬಾಳೇಹಳ್ಳಿ ಸ.ಪ್ರಾಶಾಲೆಯ 6 ತಂಡಗಳು ಭಾಗವಹಿಸಿದ್ದರು.
ವಿತ್ತೀಯ ಕಿರಿಯರ ಬ್ಯಾಂಕಿಗ್ ಪ್ರಶ್ನಾವಳಿಯಲ್ಲಿ ಬಿದರಹಳ್ಳಿ ಶಾಲೆಯ ಎರಡನೇ ತಂಡ ಪ್ರಥಮ ಸ್ಥಾನ, ಬಾಳೇಹಳ್ಳಿ ಸ.ಪ್ರಾ.ಶಾಲೆ ದ್ವಿತೀಯ ಸ್ಥಾನ, ಲೋಕವಳ್ಳಿ ಸ.ಪ್ರಾ. ಶಾಲೆ ತಣತಿಯ ಸ್ಥಾನವನ್ನು ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ರುದ್ರೇಗೌಡ, ಬ್ಯಾಂಕಿನ ಜಯತೀರ್ಥ ಅದ್ವಾನಿ, ಶಿಕ್ಷಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.