ದೇವಸ್ಥಾನಗಳ ನಿರ್ವಹಣಾ ವೆಚ್ಚ ಹೆಚ್ಚಿಸಲು ಆಗ್ರಹ
ಚಿಕ್ಕಮಗಳೂರು: ಮುಜರಾಯಿ ಇಲಾಖೆಯ ದೇವಸ್ಥಾನಗಳ ವಾರ್ಷಿಕ ನಿರ್ವಹಣಾ ವೆಚ್ಚವನ್ನು 24 ಸಾವಿರ ರು.ಗಳಿಗೆ ಹೆಚ್ಚಳ ಮಾಡುವಂತೆ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಉಪಾಧ್ಯಕ್ಷ ಸಚಿನ್ ಮೀಗಾ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ರಾಜ್ಯ ಮುಜರಾಯಿ ಸಚಿವ ಪ್ರಕಾಶ್ ಬಿ. ಹುಕ್ಕೇರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 5.42 ಕೋಟಿ ರುಪಾಯಿ ಮುಜರಾಯಿ ದೇವಸ್ಥಾನಗಳ ಪಾಸ್ ಬುಕ್ ಖಾತೆಯಲ್ಲಿ ಡಿಪಾಜಿಟ್ ಆಗಿದೆ. ಇದರಿಂದಾಗಿ ಬಹಳಷ್ಟು ಅರ್ಚಕರಿಗೆ ಸಕಾಲದಲ್ಲಿ ನಿರ್ವಹಣಾ ವೆಚ್ಚ ತಲುಪುತ್ತಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಗ್ರಾಮಗಳ ದೇವಸ್ಥಾನಗಳ ಮತ್ತು ಅರ್ಚಕರ ಹಿತಾಸಕ್ತಿಯಿಂದ ಸಂಪೂರ್ಣ ವಿವರಗಳೊಂದಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ದಾಖಲಾತಿಗಳನ್ನು ಪರಿಶೀಲಿಸಿ, ತುರ್ತು ಸಭೆ ಕರೆದು ಎಲ್ಲಾ ತಹಸೀಲ್ದಾರ್ರವರಿಗೂ ಮುಜರಾಯಿ ದೇವಸ್ಥಾನಗಳ ಖಾತೆಯಲ್ಲಿರುವ ಹಣವನ್ನು ಸಂಬಂಧಪಟ್ಟ ಅರ್ಚಕರಿಗೆ, ದೇವಸ್ಥಾನಗಳಿಗೆ ಬಿಡುಗಡೆಗೊಳಿಸುವಂತೆ ಆದೇಶಿಸಿದ್ದಾರೆ. ಅರ್ಚಕರಿಗೆ ನಿರ್ವಹಣಾ ವೆಚ್ಚ ತಲುಪುತ್ತಿಲ್ಲ ಇಂದಿನವರೆಗೆ ಸಲ್ಲಬೇಕಾದ ಹಣವನ್ನು ಒಂದೇ ಕಂತಿನಲ್ಲಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳು ನಶಿಸುವ ಹಂತದಲ್ಲಿ ಇವೆ. ಈಗ ಅರ್ಚಕರಿಗೆ ನೀಡುತ್ತಿರುವ ನಿರ್ವಹಣಾ ವೆಚ್ಚ 12 ಸಾವಿರ ರು. ಇದು ದೈನಂದಿನ ಪೂಚಾ ನಿರ್ವಹಣೆಗಳಿಗೆ ಸಾಕಾಗುತ್ತಿಲ್ಲ. ಇದರಿಂದಾಗಿ ಕೆಲವು ದೆವಸ್ಥಾನಗಳು ಪೂಜೆ ಇಲ್ಲದೆ ಗ್ರಾಮಗಳಲ್ಲಿ ಗ್ರಾಮಸ್ಥರು ವಿಷಾಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತು ಅರ್ಚಕರೂ ಅವರಿಗೆ ನೀಡುತ್ತಿರುವ ನಿರ್ವಹಣಾ ವೆಚ್ಚ ತೀರಾ ಕಡಿಮೆಯಾಗಿರುವುದರಿಂದ ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಿದ್ದು, ನಿರ್ವಹಣಾ ವೆಚ್ಚವನ್ನು ಹೆಚ್ಚಿಸುವುದು ಅರ್ಚಕರ ಹಾಗೂ ದೇವಸ್ಥಾನಗಳ ನಿರ್ವಹಣಾ ಸಮಿತಿಯವರ ಬಹು ದಿನಗಳ ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ.
ಆದುದರಿಂದ ಗ್ರಾಮಗಳ ದೇವಸ್ಥಾನಗಳ ಮತ್ತು ಅರ್ಚಕರ ಹಾಗೂ ಗ್ರಾಮಸ್ಥರ ಹಿತಾಸಕ್ತಿಯಿಂದ ಅರ್ಚಕರ ನಿರ್ವಹಣಾ ವೆಚ್ಚವನ್ನು 12 ಸಾವಿರದಿಂದ 24 ಸಾವಿರ ರು.ಗಳಿಗೆ ಹೆಚ್ಚಳ ಮಾಡಬೇಕು. ಮುಜರಾಯಿ ಇಲಾಖೆಗೆ ನೋಂದಾವಣೆಯಾಗಿ ಅಲ್ಲಿಗೆ ವಾರ್ಷಿಕ ವೆಚ್ಚವನ್ನು ತಲುಪದವರಿಗೆ ಕೂಡಲೇ ಜಿಲ್ಲಾಧಿಕಾರಿಗಳ ಮುಖಾಂತರ ಎಷ್ಟು ವರ್ಷಗಳಿಂದ ಅವರಿಗೆ ನಿರ್ವಹಣಾ ವೆಚ್ಚ ಬರುತ್ತಿಲ್ಲವೋ ಅಲ್ಲಿಂದ ಇಂದಿನವರೆಗೆ ಸಲ್ಲಬೇಕಾದ ಹಣವನ್ನು ಒಂದೇ ಕಂತಿನಲ್ಲಿ ಕೊಡಿಸಿಕೊಡಬೇಕಾಗಿ ಸೂಚಿಸುವಂತೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

