21ರಂದು ಬಿಲ್ಲವ ಸಮಾಜ ಉದ್ಘಾಟನೆ
ಶೃಂಗೇರಿ; ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ತಾಲೂಕು ಘಟಕದ ಉದ್ಘಾಟನಾ ಸಮಾರಂಭ ಇದೇ ಡಿ. 21ರಂದು ಪಟ್ಟಣದ ಡಾ. ಗೌರೀಶಂಕರ ಸಭಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ರಾಷ್ಟ್ರಿಯ ಬಿಲ್ಲವ ಮಹಾಮಂಡಳಿಯ ಅಧ್ಯಕ್ಷ ಜಯಶೀ ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ಸೊರಕೆ, ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್, ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಗಾಯತ್ರಿ ಶಾಂತೇಗೌಡ, ಶಾಸಕ ಡಿ.ಎನ್. ಜೀವರಾಜ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ತಾಲೂಕು ನಾರಾಯಣಗುರು ಬಿಲ್ಲವ ಸಮಾಜದ ಅಧ್ಯಕ್ಷ ಮಹಾಬಲಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಚುಟುಕು ಕವನಆಹ್ವಾನ
ಬಾಳೆಹೊನ್ನೂರು: ನರಸಿಂಹರಾಜಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ತಾಲೂಕಿನ ಚುಟುಕು ಕವಿಗಳನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ದೃಷ್ಟಿಯಿಂದ ಪದ ಮೂರು ಅರ್ಥ ನೂರು ಶೀರ್ಷಿಕೆಯಡಿಯಲ್ಲಿ ನ.ರಾ. ಪುರ ತಾಲೂಕಿನ ಉದಯೋನ್ಮುಖ ಕವಿಗಳ ಚುಟುಕುಗಳ ಕವನ ಸಂಕಲನ ಹೊರತರಲು ಉದ್ದೇಶಿಸಿದೆ.
ತಾಲೂಕಿನ ಚುಟುಕು ಕವಿಗಳು ತಮ್ಮ ಸ್ವರಚಿತ ನಾಲ್ಕರಿಂದ ಐದು ಸಾಲುಗಳಿಗೆ ಮೀರದ ಮೂರು ಚುಟುಕುಗಳನ್ನು ತಮ್ಮ ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಪಾಸ್ಪೋರ್ಟ್ ಅಳತೆಯ ಒಂದು ಭಾವಚಿತ್ರದೊಂದಿಗೆ, ಚೈತನ್ಯ ವೆಂಕಿ, ಅಧ್ಯಕ್ಷರು, ನರಸಿಂಹರಾಜಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್, ಜೇಸಿ ವೃತ್ತ ಬಾಳೆಹೊನ್ನೂರು ಅಂಚೆ, ಇವರಿಗೆ ಅಂಚೆ ಅಥವಾ ಕೊರಿಯರ್ ಮೂಲಕ ಜ. 10 ರೊಳಗೆ ಕಳುಹಿಸುವಂತೆ ಕೋರಿದೆ. ಮೊ. 9449205400 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

