ನಾಯಕತ್ವ ಗುಣ ಅಳವಡಿಸಿಕೊಳ್ಳಿ
ಚಿಕ್ಕಮಗಳೂರು: ನಾಯಕತ್ವ ಗುಣ ಅಳವಡಿಸಿಕೊಂಡು ಸಂಘಟನೆಗೆ ಮುಂದಾದಾಗ ಮಾತ್ರ ಸಂಘ ಬಲವರ್ಧನೆ ಸಾಧ್ಯ ಎಂದು ಕೇರಳದ ಎಸ್ಎಸ್ಎಫ್ ಮುಖಂಡ ಸ್ವಾದಿಕ್ ವೆಳಿಮುಕ್ ಹೇಳಿದ್ದಾರೆ.
ಇಲ್ಲಿನ ಆದಿಶಕ್ತಿ ನಗರದ ಸಲ್ಮಾನುಲೆ ಫೆರೀಸಿ ಜುಮ್ಮಾ ಮಸೀದಿಯಲ್ಲಿ ಎಸ್ಎಸ್ಎಫ್ ವಾರ್ಷಿಕ ಮಹಾಸಭೆ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಂಘಿಕ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ತರಬೇತಿ ಶಿಬಿರಗಳಿಂದ ಸಂಘಟನೆ ಏಳಿಗೆಗೆ ಜೊತೆಗೆ ಸಮಾಜದ ಆಗುಹೋಗುಗಳ ಬಗ್ಗೆ ಚರ್ಚಿಸಿ ಪರಿಹರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಸಮಾಜದ ಶಾಂತಿ ಮತ್ತು ಒಳಿತಾಗಿ ಎಲ್ಲರೂ ದುಡಿಯುವ ಅಗತ್ಯತೆ ಇದ್ದು ನಿಗೂಡತೆ ಮತ್ತು ದೇಶದ್ರೋಹಿ ಸಂಘಟನೆಯೊಂದಿಗೆ ಯಾವ ಮನುಷ್ಯ ಗುರುತಿಸಿಕೊಳ್ಳದ ಹಾಗೆ ಎಚ್ಚರಿಕೆ ವಹಿಸಬೇಕು ಎಂದರು.
ಎಸ್ಎಸ್ಎಫ್ ರಾಜ್ಯ ಉಪಾಧ್ಯಕ್ಷ ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಮಾತನಾಡಿ, ಜೀವನದಲ್ಲಿ ಹೃದಯ ಶುದ್ಧತೆಯಿಂದ ಸಚ್ಚಾರಿತ್ರ್ಯವಂತರ ಸದ್ಗುಣಗಳನ್ನು ಅಳವಡಿಸಿಕೊಂಡು ವಿದ್ಯೆಗೆ ಹೆಚ್ಚು ಒತ್ತು ಕೊಡುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗುವಂತೆ ಕರೆ ನೀಡಿದರು.
ಗುರುಗಳಾದ ತ್ವಾಹ ಸಅದಿ, ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಕೆ.ಪಿ. ಅಬೂಬಕರ್ ಮಾತನಾಡಿದರು. ಎಸ್ವೈಎಸ್ ಜಿಲ್ಲಾಧ್ಯಕ್ಷ ಯೂಸುಫ್ ಹಾಜಿ, ಮಸೀದಿ ಅಧ್ಯಕ್ಷರುಗಳಾದ ಮುನೀರ್ ಅಹಮದ್ ಸಾಈದ್, ಮಹಮದ್, ಅಬ್ಬಾಸ್ ಮೊದಲಾದವರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇಂದಿನಿಂದ ಎನ್ನೆಸ್ಸೆಸ್ ಶಿಬಿರ
ನರಸಿಂಹರಾಜಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಫೆ.2ರಿಂದ ಫೆ.8ರ ವರೆಗೆ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಕೆ. ಉಮೇಶ್ತಿಳಿಸಿದ್ದಾರೆ.
8ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಶಿವಮೊಗ್ಗದ ಹಿರಿಯ ಉಪ ವಿಭಾಗಾಧಿಕಾರಿ ಎಂ.ಎಲ್. ವೈಶಾಲಿ ಸಮಾರೋಪ ಭಾಷಣ ಮಾಡಲಿದ್ದಾರೆ.
7 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ವಿವಿಧ ಸರ್ಕಾರಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ಶಿಬಿರಾರ್ಥಿಗಳು 7 ದಿನಗಳ ಕಾಲ ಶೆಟ್ಟಿಕೊಪ್ಪ ಶಾಲೆಯ ಕಾಂಪೌಂಡು ನಿರ್ಮಾಣ ಹಾಗೂ ಕ್ರೀಡಾಂಗಣ ಸ್ವಚ್ಛಗೊಳಿಸಲಿದ್ದಾರೆ. ಅಲ್ಲದೆ ಶೆಟ್ಟಿಕೊಪ್ಪ ಗ್ರಾಮ ನೈರ್ಮಲ್ಯೀಕರಣ, ಅಯ್ಯಪ್ಪಸ್ವಾಮಿ ದೇವಸ್ಥಾನದ ಅಂಗಳ ಸ್ವಚ್ಛತೆ, ಚರಂಡಿ ಪುನರ್ ನಿರ್ಮಾಣ, ಜಾನುವಾರುಗಳಿಗೆ ಕಾಲುಬಾಯಿ ಜ್ವರ ಚಿಕಿತ್ಸೆಗೆ ನೆರವು, ಮನೆ ಮದ್ದು ತಯಾರಿಕೆ, ಅಣಬೆ ಕೃಷಿ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಎಂದು ಕೆ. ಉಮೇಶ್ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

