ಚಿಕ್ಕಮಗಳೂರು

ಉಚಿತ ದಂತ ತಪಾಸಣೆ ಶಿಬಿರ

Published On :

ನರಸಿಂಹರಾಜಪುರ: ಲಯನ್ಸ್ ಕ್ಲಬ್ ಹಾಗೂ ಪುಷ್ಪಾ ಆಸ್ಪತ್ರೆ ಆಶ್ರಯದಲ್ಲಿ ನಡೆದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ 250 ಜನರು ದಂತ ಪರೀಕ್ಷೆ ಮಾಡಿಸಿಕೊಂಡರು.
ಪುಷ್ಚಾ ಸೇವಾ ಸಮಾಜದ ಅಧ್ಯಕ್ಷ ಪಿ.ಜೆ. ಆಂಟೋನಿ ಶಿಬಿರ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ದಂತದ ಬಗ್ಗೆ ವೈಜ್ಞಾನಿಕವಾಗಿ ಹಲವು ಪ್ರಯೋಗಗಳು ನಡೆದು ಯಶಸ್ವಿಯಾಗಿದೆ. ಲಯನ್ಸ್ ಕ್ಲಬ್ ಆರೋಗ್ಯ ಶಿಬಿರದ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ದಕ್ಷಿಣಾ ಮೂರ್ತಿ ವಹಿಸಿದ್ದರು.
ರವಿಕುಮಾರ್, ಖಜಾಂಚಿ ಡಾ. ಮಹೇಶ್ ಭಂಡಾರಿ, ಮಣಿಪಾಲ್‌ವೈದ್ಯಕೀಯ ಮಹಾ ವಿದ್ಯಾಲಯದ ದಂತ ತಜ್ಞರಾದ ಡಾ. ದೀಪಕ್, ಡಾ. ಮೀನಾದೇವಿ, ಡಾ. ಶ್ರೀಕಾಂತ್ ಇದ್ದರು. ಮಣಿಪಾಲಿನ ದಂತ ವೈದ್ಯರ ತಂಡ ದಂತ ಪರೀಕ್ಷೆ ನಡೆಸಿತು.
ಅಗತ್ಯವಿರುವ ಔಷಧಿಗಳನ್ನು ಲಯನ್ಸ್ ಕ್ಲಬ್‌ನಿಂದ ನೀಡಲಾಯಿತು.ಪುಷ್ಪಾ ಆಸ್ಪತ್ರೆಯ ವೈದ್ಯ ಡಾ. ಮೇರಿ ಸೂಸಮ್ಮ ಹಾಗೂ ಇತರೆ ವೈದ್ಯರು, ಸಿಬ್ಬಂದಿ ಸಹಕಾರ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.