ಚಿಕ್ಕಮಗಳೂರು

ಇಂಗ್ಲಿಷ್ ಜ್ಞಾನ ಅಗತ್ಯ

Published On :

ಚಿಕ್ಕಮಗಳೂರು: ಪ್ರಸ್ತುತ ಬದುಕಿಗೆ ಉತ್ತಮವಾದ ಇಂಗ್ಲಿಷ್ ಜ್ಞಾನ ಅಗತ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರುದ್ರಸ್ವಾಮಿ ಹೇಳಿದ್ದಾರೆ.
ಮೌಂಟ್ ವ್ಯೂ ಪದವಿಪೂರ್ವ ಕಾಲೇಜಿನ ಕ್ರೀಡಾ ಸಾಂಸ್ಕೃತಿಕ ಹಾಗೂ ರಾಷ್ಟ್ರೀಯಾ ಸೇವಾ ಯೋಜನಾ ಘಟಕದ ಚಟುವಟಿಕೆಗಳ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳು ಮಾತೃ ಭಾಷೆ ಕನ್ನಡವನ್ನು ಚೆನ್ನಾಗಿ ಕಲಿಯುವುದರೊಂದಿಗೆ ಇಂಗ್ಲಿಷ್ ಜ್ಞಾನವನ್ನು ಗಳಿಸುವುದರಿಂದ ಭವಿಷ್ಯದ ಜೀವನವನ್ನು ಸಮೃದ್ಧವಾಗಿ ಕಟ್ಟಿಕೊಳ್ಳಬಹುದು ಎಂದರು. ಜಾಗತೀಕ ಮಟ್ಟದಲ್ಲಿ ಇಂದು ವಿಪರೀತ ಪೈಪೋಟಿ ಇದೆ. ಸ್ಪರ್ಧಾತ್ಮಕವಾಗಿ ಹೆಚ್ಚಿನ ವಿಷಯಗಳನ್ನು ಅರಿಯಲು, ಸಂವಾದಿಸಲು ಇಂಗ್ಲಿಷ್ ಭಾಷೆ ಸಹಕಾರಿ ಎಂದ ರುದ್ರಸ್ವಾಮಿ, ಗ್ರಾಮೀಣರು ಹಾಗೂ ದಲಿತ ಮತ್ತಿತರ ಬಡವರ್ಗಗಳನ್ನು ಇಂಗ್ಲಿಷ್ ನಿಂದ ದೂರವಿಡುವ ಪ್ರಯತ್ನ ಸರಿಯಲ್ಲ ಎಂದರು.
ಪ್ರಾಂಶುಪಾಲೆ ತಸ್ನೀಮ್ ಫಾತಿಮಾ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಎಚ್.ಎಸ್. ಪುಟ್ಟೇಗೌಡ, ಉಪ ಪ್ರಾಂಶುಪಾಲೆ ಜಲ್ಲಿ ಕೆ. ಜಾರ್ಜ್ ಮುಖ್ಯ ಅತಿಥಿಗಳಾಗಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಎಚ್.ಪಿ. ರಘು, ಸಾಂಸ್ಕೃತಿಕ  ಕಾರ್ಯದರ್ಶಿ ಶಿವರಾಜ್  ಹಾಗೂ ಕ್ರೀಡಾ ಕಾರ್ಯದರ್ಶಿ ಮುದಬೀರ್ ವರದಿ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.